ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ನಾನಿಂದು ಮಂತ್ರಿಯಾಗಿದ್ದೇನೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಓ.ಪನ್ನೀರಸೆಲ್ವಂ ಹೇಳಿದ್ದಾರೆ.
‘ನಿನ್ನ ಪಕ್ಷವನ್ನು ಉಳಿಸಬೇಕೆಂದಿದ್ದರೆ ಎಐಎಡಿಎಂಕೆಯ ಎರಡು ಬಣಗಳನ್ನು ವಿಲೀನಗೊಳಿಸು ಎಂದು ಪ್ರಧಾನಿ ಹೇಳಿದ್ದರು. ನಾನಿದಕ್ಕೆ ಒಪ್ಪಿದೆ, ಆದರೆ ಪಕ್ಷದ ಸ್ಥಾನವನ್ನು ಮಾತ್ರ ಅಲಂಕರಿಸುತ್ತೇನೆ ಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದಿದ್ದೆ. ಅದಕ್ಕವರು ಇಲ್ಲ ನೀನು ಮಂತ್ರಿಯಾಗಬೇಕು ಮತ್ತು ರಾಜಕೀಯದಲ್ಲಿ ಮುಂದುವರೆಯಬೇಕು ಎಂದಿದ್ದರು. ಈ ಕಾರಣದಿಂದಲೇ ನಾನಿಂದು ಸಚಿವನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ನಾನು ಎದುರಿಸಿದ ಕಿರುಕುಳ, ಅವಮಾನಕ್ಕೆ ಮಿತಿಯೇ ಇಲ್ಲ. ನನ್ನ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ ಅಮ್ಮ(ಜಯಲಲಿತಾ)ರಿಗಾಗಿ ಎಲ್ಲವನ್ನೂ ನಾನು ಸಹಿಸಿಕೊಂಡೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.