ಜಮ್ಮು: ಇತ್ತೀಚಿಗೆ ಜಮ್ಮುವಿನ ಸಂಜುವಾನ್ ಆರ್ಮಿ ಕ್ಯಾಂಪ್ ಮತ್ತು ಕರಣ್ ನಗರ್ನ ಸಿಆರ್ಪಿಎಫ್ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿ ಜೈಶೇ-ಇ-ಮೊಹಮ್ಮದ್ ಮತ್ತು ಲಷ್ಕರ್ -ಇ-ತೋಯ್ಬಾ ಉಗ್ರ ಸಂಘಟನೆಯ ಜಂಟಿ ಯೋಜಿತ ಕೃತ್ಯ ಎಂಬುದಾಗಿ ಸೇನೆ ಹೇಳಿದೆ.
ಈ ಎರಡು ಸಂಘಟನೆಗಳು ಒಂದೇ ಕಾಲಕ್ಕೆ ಬೇರೆ ಬೇರೆ ಕಡೆ ದಾಳಿ ನಡೆಸಲು ಯೋಜನೆ ರೂಪಿಸಿದ್ದವು. ಹೀಗಾಗೀ ಸಂಜುವಾನ್ ಮತ್ತು ಕರಣ್ ನಗರ್ನಲ್ಲಿ ಕೆಲವೇ ಸಮಯದ ಅಂತರದಲ್ಲಿ ದಾಳಿಗಳು ನಡೆದಿವೆ. ಸೈನಿಕರ ಗಮನ ಬೇರೆಡೆ ತಿರುಗಿಸುವ ಸಂಚು ಕೂಡ ಇದರ ಹಿಂದಿತ್ತು ಎಂದಿದೆ.
ಎರಡೂ ದಾಳಿಯಲ್ಲಿ ಭಾಗವಹಿಸಿದ್ದ 5 ಉಗ್ರರು ಪಾಕಿಸ್ಥಾನ ಮೂಲದವರು ಎಂದು ಸೇನೆ ಸ್ಪಷ್ಟಪಡಿಸಿದೆ.
ಅಲ್ಲದೇ ಗಡಿರೇಖೆಯ ಸಮೀಪ ಸುಮಾರು 300 ಉಗ್ರರು ಭಾರತದೊಳಕ್ಕೆ ಅಕ್ರಮವಾಗಿ ನುಸುಳಲು ಸಂಚು ರೂಪಿಸುತ್ತಿದ್ದಾರೆ ಎಂಬ ಎಚ್ಚರಿಕೆಯನ್ನೂ ಸೇನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.