ನವದೆಹಲಿ: ಒಮನ್ನ ಪ್ರಮುಖ ಡುಕ್ಮ್ ಬಂದರನ್ನು ಮಿಲಿಟರಿಗಾಗಿ ಬಳಸಿಕೊಳ್ಳುವ ಅವಕಾಶವನ್ನು ಭಾರತ ಪಡೆದುಕೊಂಡಿದೆ. ಈ ರಾಜತಾಂತ್ರಿಕ ಬೆಳವಣಿಗೆಯಿಂದಾಗಿ ಭಾರತಕ್ಕೆ ಹಿಂದೂ ಮಹಾಸಾಗರದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಸಹಕಾರಿಯಾಗಲಿದೆ.
ಒಮನ್ನ ಡುಕ್ಮ್ ಬಂದಿರನ್ನು ಇನ್ನು ಮುಂದೆ ಮಿಲಿಟರಿ ಬಳಕೆಗಾಗಿ ಮತ್ತು ಲಾಜಿಸ್ಟಿಕ್ಸ್ ಸಪೋಟ್ಗಾಗಿ ಭಾರತದ ಉಪಯೋಗಿಸಬಹುದಾಗಿದೆ. ಈ ಮೂಲಕ ಈ ಭಾಗದಲ್ಲಿ ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಒಮನ್ ಭೇಟಿಯ ಮಹತ್ವದ ಕಾರ್ಯಸಾಧನೆಗಳಲ್ಲಿ ಇದು ಅತೀ ಪ್ರಮುಖವಾದುದ್ದಾಗಿದೆ. ಅಲ್ಲಿನ ಸುಲ್ತಾನ್ ಒಮನ್ ಸೈಯದ್ ಕ್ವಾಬೂಸ್ ಬಿನ್ ಸೈದ್ ಅಲ್ ಸೈದ್ ಅವರೊಂದಿಗೆ ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.