ಮುಜಾಫರ್ಪುರ: ದೇಶಕ್ಕೆ ಅಗತ್ಯಬಿದ್ದರೆ, ಸಂವಿಧಾನ ಅನುಮತಿ ನೀಡಿದರೆ ಕೇವಲ 3 ದಿನದಲ್ಲಿ ಸೇನೆಯೊಂದನ್ನು ಸಜ್ಜುಗೊಳಿಸುವ ಸಾಮರ್ಥ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೆ ಎಂಬುದಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಜಾಫರ್ಪುರದ ಜಿಲ್ಲಾ ಶಾಲಾ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಆರ್ಮಿಯು ಸೇನೆಯನ್ನು ಸಜ್ಜುಗೊಳಿಸಲು 6-7 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಂಘಕ್ಕೆ ಕೇವಲ 3 ದಿನಗಳು ಸಾಕು. ದೇಶಕ್ಕೆ ಆಪತ್ತು ಒದಗಿದರೆ, ಸಂವಿಧಾನ ಅನುಮತಿ ನೀಡಿದರೆ ನಮ್ಮ ಸ್ವರ್ಯಸೇವಕರು ದೇಶಕ್ಕಾಗಿ ಮುಂದಾಳತ್ವ ತೆಗೆದುಕೊಳ್ಳಲು ಸಿದ್ಧ’ ಎಂದಿದ್ದಾರೆ.
ಈಗಾಗಲೇ ಸಮಾಜದಲ್ಲಿ ದೇಶವ್ಯಾಪಿ ಸಂಘದ ನಿತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಕಾರ್ಯಕ್ರಮಗಳಲ್ಲಿ ಸಮಾಜದ ಕಾಳಜಿಯ ಬಗ್ಗೆ ಮತ್ತು ಸಮಾಜ ರಕ್ಷಣೆಯ ಬಗ್ಗೆ ಶಿಕ್ಷಣ ನಿರಂತರವಾಗಿ ನೀಡಲಾಗುತ್ತಿರುವುದರಿಂದ ಆಪತ್ಕಾಲದಲ್ಲಿ ದೇಶಸೇವೆಗೆ ಸೈನಿಕರಂತೆ ಸಜ್ಜುಗೊಳಿಸಲು ಸಾಧ್ಯವಾಗುತ್ತದೆ ಎನ್ನುವ ಅರ್ಥದಲ್ಲಿ ಹೇಳುತ್ತಾ ಇದು ನಮ್ಮ ಸಾಮರ್ಥ್ಯ ಎಂದು ವಿವರಿಸಿದರು.
ಸಂಘ ಮಿಲಿಟಿರಿ ಅಥವಾ ಪ್ಯಾರ ಮಿಲಿಟರಿಯಲ್ಲ. ಅದೊಂದು ಪಾರಿವಾರಿಕ ಸಂಘಟನೆ. ಇಲ್ಲಿ ಶಿಸ್ತನ್ನು ಸೇನೆಯಂತೆ ಕಲಿಸಿಕೊಡಲಾಗುತ್ತದೆ. ತಮ್ಮ ದೇಶಕ್ಕಾಗಿ ಕಾರ್ಯಕರ್ತರು ಸಂತೋಷದಿಂದ ಯಾವ ಉನ್ನತ ತ್ಯಾಗ ಮಾಡಲೂ ಸಿದ್ಧರಾಗಿದ್ದಾರೆ ಎಂದರು.
ಮೋಹನ್ ಭಾಗವತ್ ಅವರ ಭಾಷಣವನ್ನು ತಪ್ಪಾಗಿ ಪ್ರಸ್ತುತ ಪಡಿಸಲಾಗಿದೆ. ಒಂದು ವೇಳೆ ಪರಿಸ್ಥಿತಿ ಉದ್ಭವಿಸಿದರೆ ಮತ್ತು ಸಂವಿಧಾನ ಅನುಮತಿ ನೀಡಿದರೆ, ಭಾರತೀಯ ಸೇನೆಯು ಸಮಾಜವನ್ನು ಸಜ್ಜುಗೊಳಿಸಲು 6 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಸಂಘದ ಸ್ವಯಂಸೇವಕರು 3 ದಿನಗಳಲ್ಲಿ ತರಬೇತಿ ಪಡೆಯುತ್ತಾರೆ. ಶಿಸ್ತನ್ನು ನಿರಂತರ ಅಭ್ಯಾಸ ಮಾಡುವುದೇ ಇದಕ್ಕೆ ಕಾರಣ. ಇದು ಯಾವುದೇ ರೀತಿಯಲ್ಲೂ ಭಾರತೀಯ ಸೇನೆ ಮತ್ತು ಸಂಘದ ಸ್ವಯಂಸೇವಕರ ತುಲನೆಯಲ್ಲ. ಇದು ಸಾಮಾನ್ಯ ಸಮಾಜ ಮತ್ತು ಸ್ವಯಂಸೇವಕರ ನಡುವಿನ ತುಲನೆ. ಇವರಿಬ್ಬರೂ ಭಾರತೀಯ ಸೇನೆಯಿಂದಲೇ ತರಬೇತಿ ಪಡೆಯುತ್ತಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಡಾ.ಮನಮೋಹನ್ ವೈದ್ಯ ಅವರು ತಮ್ಮ ಪ್ರಕಟನೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಮೋಹನ್ ಭಾಗವತ್ ಅವರು ಹೇಳಿದ್ದೇನು ? ವೀಡಿಯೋ ನೋಡಿ .
ಡಾ.ಮನಮೋಹನ್ ವೈದ್ಯ ಅವರ ಪ್ರಕಟಣೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.