ನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಅವರು ಚೀನಾ ಲೇಡೀಸ್ ಪಿಜಿಎ ಟೂರ್ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
26 ವರ್ಷದ ಬೆಂಗಳೂರಿನ ಈ ಗಾಲ್ಫರ್ ಪಿಜಿಎ ಟೂರ್ಗಾಗಿ ಸಿಎಲ್ಪಿಜಿಎ ಟೂರ್ನಲ್ಲಿ ಕಳೆದ ಎರಡು ರೌಂಡ್ಗಳಲ್ಲಿ ತೀವ್ರ ಹೋರಾಟ ನಡೆಸಿದ್ದರು. ಮಹಿಳಾ ವರ್ಲ್ಡ್ ರ್ಯಾಂಕಿಂಗ್ ಪಾಯಿಂಟ್ನ್ನು ಕೂಡ ಇದು ಒಳಗೊಂಡಿದೆ.
ಶರ್ಮಿಳಾ ಸಿಎಲ್ಪಿಜಿಎ ಟೂರ್ ಕ್ವಾಲಿಫೈಯಿಂಗ್ ಸ್ಕೂಲ್ನಲ್ಲಿ 77-73-72 ಪಡೆದು 21ನೇ ಸ್ಥಾನ ಪಡೆದಿದ್ದರು. ಈ ಮೂಲಕ ೮೮ ಪ್ಲೇಯರ್ ಫೀಲ್ಡ್ನಲ್ಲಿ ಬಾಕಿ ಉಳಿದಿದ್ದ ೩೦ ಕಾರ್ಡ್ಗಳಲ್ಲಿ ಒಂದನ್ನು ಪಡೆದುಕೊಂಡರು. ಈ ಕಾರ್ಡ್ ಮೂಲಕ ಅವರು ಪಿಜಿಎ ಟೂರ್ನಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.