ಪುಣೆ: ಪುಣೆ ಮೂಲದ ಈಜುಗಾರ ರೋಹನ್ ಮೋರೆಯವರು ಓಶಿಯನ್ ಸೇವನ್ನಾದ್ಯಂತ ಈಜಿದ ಮೊದಲ ಏಷ್ಯನ್ ಮತ್ತು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೇ ರೋಹನ್ ಅವರು ಓಶಿಯನ್ ಸೆವನ್ ಈಜಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿಯೂ ಆಗಿದ್ದಾರೆ. ಅಲ್ಲದೇ ಈ ಸವಾಲನ್ನು ಪೂರೈಸಿದ ವಿಶ್ವದ 9ನೇ ವ್ಯಕ್ತಿಯಾಗಿದ್ದಾರೆ.
ಓಶಿಯನ್ ಸೆವನ್ ಮ್ಯಾರಥಾನ್ ಓಪನ್ ವಾಟರ್ ಸ್ವಿಮ್ಸ್ನ 7 ಸುಧೀರ್ಘ ಅಂತರಗಳನ್ನು ಒಳಗೊಂಡಿದ್ದು, ಇದು ಸೆವೆನ್ ಸಮಿತ್ ಪರ್ವತಾರೋಹಣ ಸವಾಲಿಗೆ ಸಮಾನವಾದುದು ಎಂದು ಪರಿಗಣಿಸಲಾಗುತ್ತದೆ.
ಫೆ.9ರಂದು ಈಜನ್ನು ಉತ್ತರ ಐಸ್ಲ್ಯಾಂಡ್ನಿಂದ ಆರಂಭಿಸಿದ್ದ ಇವರು, 8 ಗಂಟೆ 37 ನಿಮಿಷದ ಅವಧಿಯಲ್ಲಿ ಸವಾಲನ್ನು ಪೂರೈಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.