ಇಟನಗರ್: ಒಂದೇ ದಿನದಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜ ಗ್ರಾಮದ 31 ಕುಟುಂಬಗಳು ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿವೆ.
ಲೊಕೇಶನ್ ಪ್ಲ್ಯಾನ್ ಯುನಿಟ್ಸ್ ನಿರ್ಮಾಣಕ್ಕಾಗಿ 5 ವರ್ಷಗಳ ಹಿಂದೆ ಸೇನೆ ಇವರಿಂದ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ ಅದರ ಪರಿಹಾರ ಮೊತ್ತ ಕುಟುಂಬಗಳಿಗೆ ಇತ್ತೀವಿನವರೆಗೂ ಸಿಕ್ಕಿರಲಿಲ್ಲ.
ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯತ್ನದ ಫಲವಾಗಿ ಒಟ್ಟು 40.80 ಕೋಟಿ ರೂಪಾಯಿಗಳ ಚೆಕ್ನ್ನು 31 ಕುಟುಂಬಗಳಿಗೆ ನೀಡಲಾಗಿದೆ. ತಲಾ ಒಂದು ಕುಟುಂಬ 6 ಕೋಟಿ, ಕೆಲವು ಕುಟುಂಬಗಳು 2 ಕೋಟಿ ಹೀಗೆ ಪರಿಹಾರ ಮೊತ್ತವನ್ನು ಪಡೆದುಕೊಂಡಿವೆ.
ಅಲ್ಲಿನ ಸಿಎಂ ಚೆಕ್ನ್ನು ಕುಟುಂಬ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದ್ದು, ರಕ್ಷಣಾ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅರುಣಚಲದಲ್ಲಿ ಸೇನಾ ನೆಲೆಗಳನ್ನು ಸ್ಥಾಪನೆ ಮಾಡಲು ಸೇನೆ ಹಲವಾರು ಎಕರೆಗಳಷ್ಟು ಭೂಮಿ ಸ್ವಾಧೀನ ಪಡಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.