ಬೆಂಗಳೂರು: ವಿಜಯಯಾತ್ರೆಯನ್ನು ಕರ್ನಾಟಕದಲ್ಲೂ ಮುಂದುವರೆಸಲು ಶತಾಯ ಗತಾಯ ಹೋರಾಟ ನಡೆಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ತಯಾರಿಯಲ್ಲಿದ್ದಾರೆ.
ಪ್ರತಿ ರಾಜ್ಯದಲ್ಲೂ ಅವರು ದೇಗುಲ ಭೇಟಿಯ ಮೂಲಕವೇ ಪ್ರಚಾರ ಕಾರ್ಯ ಆರಂಭಿಸುತ್ತಾರೆ, ಅದರಂತೆ ಕರ್ನಾಟಕದಲ್ಲೂ ಅವರು ದೇಗುಲಗಳ ಭೇಟಿಯ ಮೂಲಕವೇ ಚುನಾವಣಾ ಪ್ರಚಾರ ಪರ್ವ ಆರಂಭಿಸಲಿದ್ದಾರೆ.
ಫೆ.18ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅವರು ಭೇಟಿ ಕೊಡಲಿದ್ದು, ಪೂಜಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾರ್ಯಕರ್ತರೊಡನೆ ಸಭೆ ನಡೆಸಲಿದ್ದಾರೆ. ಬಳಿಕ ಫೆ.19ರಂದು ಧರ್ಮಸ್ಥಳಕ್ಕೆ ಭೇಟಿಕೊಡಲಿದ್ದಾರೆ. ಪುತ್ತೂರು, ಮಂಗಳೂರಿಗೆ ಭೇಟಿಕೊಟ್ಟು ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಅಲ್ಲದೇ ಅವರು ಇತ್ತೀಚಿಗೆ ಕೊಲೆಗೀಡಾದ ಹಿಂದೂ ಕಾರ್ಯಕರ್ತ ಶರತ್ ಮಡಿವಾಳ ಹಾಗೂ ದೀಪಕ್ ರಾವ್ ಮನೆಗಳಿಗೂ ಅವರು ಭೇಟಿಕೊಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.