ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ಐತಿಹಾಸಿಕ ಚಂದ್ರಯಾನ-2ನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಇದು ದೇಶದ ಮೊದಲ ಚಂದ್ರಯಾನವಲ್ಲದಿದ್ದರೂ ಚಂದ್ರನ ಅಧ್ಯಯನದ ಮಹತ್ವದ ಯೋಜನೆಯಾಗಲಿದೆ.
ಇದೇ ವರ್ಷದ ಎಪ್ರಿಲ್ನಲ್ಲಿ ಚಂದ್ರಯಾನ-2 ನಡೆಯಲಿದ್ದು, ಇಸ್ರೋ ಕಳುಹಿಸಲಿರುವ ರೋವರ್ ಚಂದ್ರನ ಮೇಲ್ಮೈನಲ್ಲಿ 14 ದಿನಗಳ ಕಾಲ ಇರಲಿದೆ. ಈಗಾಗಲೇ ಎರಡು ಲ್ಯಾಂಡಿಂಗ್ ಸೈಟ್ನ್ನು ಇಸ್ರೋ ವಿಜ್ಞಾನಿಗಳು ಗುರುತಿಸಿದ್ದಾರೆ. ಇದರಲ್ಲಿ ಒಂದನ್ನು ಆಯ್ಕೆ ಮಾಡಲಿದ್ದಾರೆ. ಇದುವರೆಗಿನ ಯಾವುದೇ ಚಂದ್ರಯಾನ ಈ ಜಾಗದಲ್ಲಿ ಲ್ಯಾಂಡ್ ಆಗಿಲ್ಲ ಎನ್ನಲಾಗಿದೆ.
ಶ್ರೀಹರಿಕೋಟಾದಿಂದ ಇದು ಉಡಾವಣೆಗೊಳ್ಳಲಿದ್ದು, ಒಂದು ಅಥವಾ ಎರಡು ತಿಂಗಳಲ್ಲಿ ಚಂದ್ರನನ್ನು ಪ್ರವೇಶಿಸಲಿದೆ. 14 ದಿನಗಳ ಕಾಲ ಅಲ್ಲಿ ತಂಗುವ ಸಾಮರ್ಥ್ಯ ರೋವರ್ಗೆ ಇರಲಿದೆ. ಅಲ್ಲಿ ಅದು ಸಾಕಷ್ಟು ಪ್ರಯೋಗಗಳನ್ನು ನಡೆಸಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.