ನವದೆಹಲಿ: ನೌಕಾ ಪಡೆಯ ಮಹಿಳಾ ಸಿಬ್ಬಂದಿಯನ್ನು ಹೊತ್ತು ವಿಶ್ವ ಪರ್ಯಟನೆ ನಡೆಸುತ್ತಿರುವ ಐಎನ್ಎಸ್ವಿ ತಾರಿಣಿ ಫೆ.4ರಂದು ಫಾಲ್ಕ್ ಲ್ಯಾಂಡ್ ನ ಸ್ಟ್ಯಾನ್ಲಿ ಪೋರ್ಟ್ನಿಂದ ನಿರ್ಗಮಿಸಿದ್ದು, ಕೇಪ್ ಟೌನ್ನತ್ತ ಪ್ರಯಾಣಿಸಿದೆ.
ಪರ್ಯಟನೆಯ ಮೂರನೇ ಹಂತವನ್ನು ಪೂರೈಸಿದ್ದ ತಾರಿಣಿ ಜ.21ರಂದು ಸ್ಟ್ಯಾನ್ಲಿಗೆ ಆಗಮಿಸಿತ್ತು. ಇದೀಗ ಅಲ್ಲಿಂದ ಮತ್ತೊಂದು ಸುತ್ತಿನ ಪರ್ಯಟನೆ ಆರಂಭಿಸಿದೆ.
ಲೆಫ್ಟಿನೆಂಟ್ ಕಮಾಂಡರ್ ವಾರ್ತಿಕ ಜೋಶಿ ನೇತೃತ್ವದ ಲೆ.ಕಮಾಂಡರ್ ಪ್ರತಿಭಾ ಜಮ್ವಾಲ, ಪಿ.ಸ್ವಾತಿ, ಲೆ.ವಿಜಯ ದೇವಿ, ಬಿ.ಐಶ್ವರ್ಯ ಮತ್ತು ಪಾಯಲ್ ಗುಪ್ತಾ ಅವರುಗಳನ್ನು ಒಳಗೊಂಡ ತಂಡ ಐಎನ್ಎಸ್ವಿ ತಾರಿಣಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.