ನವದೆಹಲಿ: ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲಾಗಿದ್ದ ಡೈನಾಮಿಕ್ ಫೆಕೆಡ್ ಲೈಟಿಂಗ್ನ್ನು ಉದ್ಘಾಟನೆಗೊಳಿಸಿದರು.
ರಾಷ್ಟ್ರಪತಿ ಭವನವನ್ನು ಬೆಳಗಿಸಲು ಒಟ್ಟು628 ಲೈಟ್ಗಳನ್ನು ಅಳವಡಿಸಲಾಗಿದೆ. ಬೆಳಕು ವಿಸ್ತಾರವಾಗಿ ಹರಡುವ ಸಲುವಾಗಿ ವ್ಯಾಪಕ ವೈವಿಧ್ಯಮಯ ಲೆನ್ಸ್ಗಳನ್ನು ಫಿಟ್ ಮಾಡಲಾಗಿದೆ. ಜೈಪುರ ಕಾಲಂನ ಕಮಲದಂತಹ ಕೆಲವೊಂದು ನಿರ್ದಿಷ್ಟ ವಸ್ತುಗಳು ಎದ್ದು ಕಾಣುವಂತೆ ಕಿರಿದಾದ ಕಿರಣಗಳ ಲೆನ್ಸ್ ಅಳವಡಿಸಲಾಗಿದೆ, ಅಗಲ ಪ್ರದೇಶದಲ್ಲಿ ಬೆಳಕು ಹರಡಲು ವೈಡರ್ ಬೀಮ್ ಲೆನ್ಸ್ ಅಳವಡಿಸಲಾಗಿದೆ.
ಜೈಪುರ್ ಕಾಲಂ, ಪ್ರಮುಖ ಕಟ್ಟಡದ ಗುಮ್ಮಟ, ಚಟ್ರೀಸ್, ಟೆರೇಸ್ ಮೇಲಿನ ಫೌಂಟೇನ್, ಗ್ರೌಂಡ್ ಲೆವೆಲ್ಗಳು ಎದ್ದು ಕಾಣುವಂತೆ ಲೈಟಿಂಗ್ಸ್ ಮಾಡಲಾಗಿದೆ.
In the run-up to Republic Day #PresidentKovind inaugurates the dynamic facade lighting of Rashtrapati Bhavan; 628 light fittings have been installed for illumination of the building pic.twitter.com/YLH6soal2O
— President of India (@rashtrapatibhvn) January 19, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.