ಲಕ್ನೋ: ಇಸ್ಲಾಮಿಕ್ ಶಿಕ್ಷಣವನ್ನು ನೀಡುವ ಮದರಸಾಗಳನ್ನು ಆಧುನೀಕರಣಗೊಳಿಸುವ ಅವಶ್ಯಕತೆಯಿದೆ, ಅವುಗಳನ್ನು ಮುಚ್ಚುವುದು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಈ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ನಾವು ಆಧುನೀಕರಣಗೊಳಿಸಬೇಕು, ಕಂಪ್ಯೂಟರ್ಗಳಿಗೆ ಅವುಗಳನ್ನು ಲಿಂಕ್ ಮಾಡಬೇಕು ಎಂದಿದ್ದಾರೆ.
ಸಂಸ್ಕೃತ ವಿದ್ಯಾಲಯಗಳು ಕೂಡ ಆಧುನಿಕತೆಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದಿದ್ದಾರೆ.
ಇತ್ತೀಚಿಗಷ್ಟೇ ಮದರಸಾಗಳನ್ನು ಮುಚ್ಚಬೇಕು, ಅವುಗಳು ಮೂಲಭೂತವಾದವನ್ನು ಪ್ರೋತ್ಸಾಹಿಸುತ್ತಿವೆ ಎಂಬ ಹೇಳಿಕೆಯನ್ನು ಮುಸ್ಲಿಂ ನಾಯಕರೊಬ್ಬರು ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.