ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್ವರೆಗೆ ಪ್ರತಿ ತಿಂಗಳು ಔಪಚಾರಿಕ ವಲಯದಲ್ಲಿ 590,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಈ ಮೂಲಕ 2017-18ನೇ ಸಾಲಿನಲ್ಲಿ ಔಪಚಾರಿಕ ವಲಯದಲ್ಲಿ ಏಳು ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಿವೆ.
ಎಸ್ಬಿಐ ಗ್ರೂಪ್ನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಕಾಂತಿ ಘೋಷ್ ಮತ್ತು ಬೆಂಗಳೂರು ಐಐಎಂ ಪ್ರೊಫೆಸರ್ ಪುಲಕ್ ಘೋಷ್ ಅವರು ಜಂಟಿಯಾಗಿ ಅಧ್ಯಯನ ನಡೆಸಿದ್ದಾರೆ.
ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್, ಇನ್ಸುರೆನ್ಸ್ ಕಾರ್ಪೋರೇಶನ್, ಜನರಲ್ ಪ್ರೊವಿಡೆಂಟ್ ಫಂಡ್, ನ್ಯಾಷನಲ್ ಪೆನ್ಶನ್ ಸ್ಕೀಮ್ನಲ್ಲಿ ಸೃಷ್ಟಿಯಾದ ಒಟ್ಟು ಉದ್ಯೋಗಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.