ನವದೆಹಲಿ: ಭಯೋತ್ಪಾದಕರನ್ನು ನಿರಂತರವಾಗಿ ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಿಡಿಕಾರಿದ್ದಾರೆ.
ನವದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ನಡೆದ 70ನೇ ಸೇನಾದಿನದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ನೆರೆಯ ದೇಶದ ಯಾವುದೇ ಪ್ರಚೊದನಕಾರಿ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುವ ಕಾರ್ಯವನ್ನು ಸೇನೆ ಮುಂದುವರೆಸಲಿದೆ. ನಿರಂತರವಾಗಿ ಅವರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಕ್ತಿಯನ್ನು ಬಳಸಿ ಅವರಿಗೆ ಪಾಠ ಕಲಿಸುತೇವೆ’ ಎಂದಿದ್ದಾರೆ.
ಅಗತ್ಯಬಿದ್ದರೆ ಶತ್ರುಗಳ ವಿರುದ್ಧಸೇನೆ ಇನ್ನಷ್ಟು ಕಟುವಾದ ನಿಲುವುಗಳನ್ನು ತೆಗೆದುಕೊಳ್ಳಲು ಸಿದ್ಧವಿದೆ. ಭಾರತ ವಿರೋಧಿ ಕೃತ್ಯಗಳು ಯಶಸ್ವಿಗೊಳ್ಳಲು ನಾವೆಂದಿಗೂ ಬಿಡಲಾರೆವು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.