ನವದೆಹಲಿ: ಯೋಗ ಗುರು ರಾಮ್ದೇವ್ ಬಾಬಾ ಅವರ ಪತಂಜಲಿ ಆಯುರ್ವೇದ ಸಂಸ್ಥೆಯಲ್ಲಿ ಫ್ರೆಂಚ್ ಲಕ್ಸುರಿ ಗ್ರೂಪ್ ಎಲ್ವಿಎಂಎಚ್ ಮೋಯಿಟ್ ಹೆನ್ನೆಸ್ಸೆ-ಲೂಯಿಸ್ ವಿಯುಟ್ಟೊನ್ ಬರೋಬ್ಬರಿ ರೂ.3,250 ಕೋಟಿ ಬಂಡಾವಳ ಹೂಡಲು ಮುಂದಾಗಿದೆ.
ಈ ಬಗ್ಗೆ ಪತಂಜಲಿ ಸಂಸ್ಥೆಯ ವಕ್ತಾರ ಎಸ್ಕೆ ಗುಪ್ತ ತಿಜರವಾಲ ಅವರು ಟ್ವಿಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
‘ಆಚಾರ್ಯ ಬಾಲಕೃಷ್ಣ(ಪತಾಂಜಲಿ ಎಂಡಿ) ಅವರು ಹೇಳಿದಂತೆ ವಿದೇಶಿ ತಂತ್ರಜ್ಞಾನಗಳನ್ನು ಬಳಸುವ ನಾವು ಅಭಿವೃದ್ಧಿಗಾಗಿ ವಿದೇಶಿ ಅನುದಾನಗಳನ್ನು ಬಳಸಲು ಹಿಂಜರಿಯಬಾರದು, ಆದರೆ ನಾವು ನಮ್ಮ ನಿಯಮದಂತೆ ಅದನ್ನು ಸ್ವೀಕರಿಸುತ್ತೇವೆ’ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ನಾಗ್ಪುರ, ಗ್ರೇಟರ್ ನೊಯ್ಡಾ, ಅಸ್ಸಾಂ, ಚತ್ತೀಸ್ಗಢ, ಆಂಧ್ರ, ತೆಲಂಗಾಣ, ಹರಿಯಾಣ, ರಾಜಸ್ಥಾನಗಳಲ್ಲಿ ಪ್ಲಾಂಟ್ಗಳನ್ನು ಸ್ಥಾಪಿಸಲು ಪತಾಂಜಲಿಗೆ ರೂ. 5 ಸಾವಿರ ಕೋಟಿ ಅಗತ್ಯವಿದೆ ಎಂದು ಆಚಾರ್ಯ ಹೇಳಿರುವುದಾಗಿ ಗುಪ್ತಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.