ನವದೆಹಲಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ನಿಂದಾಗಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ(WEF)ನ ಸ್ಥಾಪಕ ಕ್ಲೌಸ್ ಸ್ಕ್ವಾಬ್ ಹೇಳಿದ್ದಾರೆ.
ವರ್ಲ್ಡ್ ಎಕನಾಮಿಕ್ ಫೋರಂನ ವೆಬ್ಸೈಟ್ನಲ್ಲಿ ‘India’s opportunity in a multiconceptual world’ ಎಂಬ ಬಗ್ಗೆ ಲೇಖನ ಬರೆದಿರುವ ಅವರು, ’ಸಂಕೀರ್ಣ ಫೆಡರಲ್ ರಚನೆಯ ಆಡಳಿತ, ಬಹುತ್ವ ಮತ್ತು ವೈವಿಧ್ಯತೆ ಇದ್ದರೂ ಎಲ್ಲರೊಂದಿಗೆ ಎಲ್ಲರ ವಿಕಾಸ ಮಂತ್ರದ ಮೂಲಕ ಭಾರತ ಅಮೋಘ ಸಾಧನೆ ಮಾಡಿದೆ’ ಎಂದಿದ್ದಾರೆ.
ಅಲ್ಲದೇ ಮಾಲಿನ್ಯ ಮಟ್ಟ ತಗ್ಗಿಸಲು ಮತ್ತು ದೇಶದ ಮೂಲಸೌಕರ್ಯ ವೃದ್ಧಿಸುವತ್ತವೂ ಭಾರತ ಕಾರ್ಯನಿರ್ವಹಿಸಬೇಕು, ಇದರಿಂದ ಅದರ ಜಾಗತಿಕ ಪ್ರಭಾವ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.