ನವದೆಹಲಿ: ಟ್ರಾಫಿಕ್ ದಟ್ಟಣೆಯಿಂದ ಬೇಸತ್ತವರಿಗಾಗಿ ಸಹಾಯ ಮಾಡಲೆಂದೇ ಬರುತ್ತಿದೆ ಹಾರುವ ರಿಕ್ಷಾಗಳು. ಹೌದು, ಇದು ವಿಮಾನವಲ್ಲ, ಹಾಗೆಯೇ ಸೈನ್ಸ್ ಫಿಕ್ಷನ್ ಕೂಡ ಅಲ್ಲ. ನೂರಕ್ಕೆ ನೂರರಷ್ಟು ಸತ್ಯ. ಭಾರತಕ್ಕೆ ಶೀಘ್ರವೇ ಫ್ಲೈಯಿಂಗ್ ರಿಕ್ಷಾಗಳು ಬರಲಿವೆ.
ಸುಗಮ ಸಾರಿಗೆ ವ್ಯವಸ್ಥೆಗಾಗಿ ಡ್ರೋನ್ ತಂತ್ರಜ್ಞಾನ ಆಧಾರಿತ ‘ಏರ್ ರಿಕ್ಷಾ’ಗಳನ್ನು ಪರಿಚಯಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಟ್ರಾಫಿಕ್ ದಟ್ಟಣೆ ತಡೆಯಲು ದ್ರೋನ್ ತಂತ್ರಜ್ಞಾನ ಆಧಾರಿತ ಏರ್ ರಿಕ್ಷಗಳು ಸಹಕಾರಿಯಾಗಬಲ್ಲವು. ಈ ಬಗ್ಗೆ ನಮ್ಮ ಸಚಿವಾಲಯ ಚಿಂತನೆ ನಡೆಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.