ಜಲಂಧರ್: ರಾಜತಾಂತ್ರಿಕರನ್ನು ಮರಳಿ ಶಾಲೆಗೆ ಕಳುಹಿಸುವ ಸರ್ಕಾರದ ನೂತನ ಅಭಿಯಾನ ‘ಸಮೀಪ್’ ಆರಂಭಗೊಂಡಿದೆ. ಬರ್ಲಿನ್ನ ಭಾರತೀಯ ರಾಯಭಾರ ಕಛೇರಿಯಲ್ಲಿ ನಿಯೋಜಿತರಾಗಿರುವ ರಾಘು ಪುರಿ ಅವರು ಪಂಜಾಬ್ನ ಜಲಂಧರ್ನಲ್ಲಿನ ಶಾಲೆಗೆ ಭೇಟಿಕೊಟ್ಟಿದ್ದಾರೆ.
ಶಾಲೆಯ ಸುಮಾರು 150 ಮಕ್ಕಳು ರಾಘು ಅವರೊಂದಿಗೆ ಚರ್ಚೆ ನಡೆಸಿ ಅವರ ಉದ್ಯೋಗ, ಕಾರ್ಯ, ಕಾರ್ಯಶೈಲಿಯ ಬಗ್ಗೆ ತಿಳಿದುಕೊಂಡರು.
ವಿದೇಶಾಂಗ ಸಚಿವಾಲಯ ’ಸಮೀಪ್’ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದರಡಿ ರಾಜತಾಂತ್ರಿಕರು ತಾವು ಕಲಿತ ಶಾಲೆಗಳಿಗೆ, ಕಾಲೇಜುಗಳಿಗೆ ಭೇಟಿಕೊಟ್ಟು ಅಲ್ಲಿನ ಮಕ್ಕಳಿಗೆ ವಿದೇಶಿ ನಿಯಮಗಳ ಬಗ್ಗೆ ತಿಳಿಸಿಕೊಡಬೇಕು.
ರಾಜತಾಂತ್ರಿಕ ಕಾರ್ಯ ಏನು? ಅವರ ವೃತ್ತಿ ಹೇಗಿರುತ್ತದೆ? ವಿದೇಶದಲ್ಲಿ ಕೂತು ಅವರು ಏನು ಮಾಡುತ್ತಾರೆ? ವಿದೇಶಿ ನಿಯಮಗಳೇನು? ಎಂಬಿತ್ಯಾದಿ ಕುತೂಹಲಭರಿತ ವಿಷಯಗಳನ್ನು ಮಕ್ಕಳು ರಾಘು ಅವರ ಬಳಿ ಕೇಳಿ ತಿಳಿದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.