ಆಗ್ರಾ: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಆರು ಮಂದಿ ಮಕ್ಕಳ ದಯಾ ಮರಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಆಗ್ರಾದ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ.
ತಿಂಗಳಿಗೆ 5 ಸಾವಿರ ವೇತನ ಪಡೆಯುವ ಮೊಹಮ್ಮದ್ ನಝೀರ್ ಅವರಿಗೆ ಒಟ್ಟು 8 ಮಂದಿ ಮಕ್ಕಳು, ಇದರಲ್ಲಿ ಆರು ಮಂದಿ ಮಕ್ಕಳು ನರ ರೋಗದಿಂದ ಹಾಸಿಗೆ ಹಿಡಿದಿದ್ದಾರೆ. ಇವರ ಕೆಳ ದೇಹ ಸಂಪೂರ್ಣ ಪಾರ್ಶ್ವವಾಯುಗೆ ಒಳಗಾಗಿದ್ದು, ಧ್ವನಿ ಮತ್ತು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.
8ರಿಂದ 18 ವರ್ಷದೊಳಗಿನ ಈ ಮಕ್ಕಳ ಕಾಯಿಲೆ ಗುಣಪಡಿಸಲು ಸಾಧ್ಯವಾದುದು ಎಂದು ವೈದ್ಯರು ಹೇಳಿದ್ದರೂ ಅದಕ್ಕಾಗಿ ಖರ್ಚು ಮಾಡುವ ತಾಕತ್ತು ನಝೀರ್ ಅವರಿಗಿಲ್ಲ.
ಇತ್ತ ಮಕ್ಕಳಿಗೆ ಚಿಕಿತ್ಸೆ ಕೊಡಲೂ ಆಗದೆ, ಅತ್ತ ಅವರನ್ನು ನೋಡಿಕೊಳ್ಳಲು ಆಗದ ಕರುಣಾಜನಕ ಸ್ಥಿತಿಯಲ್ಲಿರುವ ಅವರು, ಇದೀಗ ತಮ್ಮ ಮಕ್ಕಳಿಗೆ ದಯಾ ಮರಣ ನೀಡುವಂತೆ ಕೋರಿದ್ದಾರೆ.
ಮಕ್ಕಳ ನರಳುವಿಕೆಯನ್ನು ನೋಡಲಾಗದೆ ಹೃದಯವನ್ನು ಬಿಗಿ ಹಿಡಿದು ಈ ನಿರ್ಧಾರಕ್ಕೆ ಬಂದಿರುವುದಾಗಿ ನಝೀರ್ ಮತ್ತು ಅವರ ಪತ್ನಿ ದುಃಖ ತೋಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.