ನವದೆಹಲಿ: ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಟಾರ್ಗೆಟ್ ಇಟ್ಟುಕೊಂಡಿದೆ. ಮೊದಲ ಬಾರಿಗೆ ಮತ ಹಾಕಲು ಅರ್ಹರಾಗುವ 2000ನೇ ಇಸವಿಯಲ್ಲಿ ಹುಟ್ಟಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅದು ‘ಸಹಸ್ರಾರು ಮತದಾರ ಅಭಿಯಾನ’ವನ್ನು ಆರಂಭಿಸಲಿದೆ. ಜನವರಿ 18ರಂದು ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.
ಯುವ ಮತದಾರರಿಗೆ ಸುಲಭವಾಗಿ ವೋಟರ್ ಐಡಿ ಸಿಗುವಂತೆ ಮಾಡುವ ಸಲುವಾಗಿ ಆಪ್ನ್ನು ಕ್ರಿಯೆಟ್ ಮಾಡಲಿದೆ. ಒಂದು ಬಾರಿ ಆಪ್ಗೆ ರಿಜಿಸ್ಟರ್ ಆದವರು ಬಿಜೆಪಿಯಲ್ಲೇ ಇರುತ್ತಾರೆ ಎಂಬುದು ಅದರ ಅನಿಸಿಕೆ.
’ಹೊಸ ಪೀಳಿಗೆಯ ಮತದಾನದಿಂದಾಗಿ 2019ರ ಚುನಾವಣೆಗೆ ಸಂಪೂರ್ಣ ವಿಭಿನ್ನವಾಗಿರಲಿದೆ, ಅವರೊಂದಿಗೆ ವಿಭಿನ್ನವಾಗಿಯೇ ಮಾತನಾಡಬೇಕಿದೆ, ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಬೇಕಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.