ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ ಅರುಣಾಚಲ ಪ್ರದೇಶದ ಉಪ್ಪರ್ ಸಿಯಾಂಗ್ ಜಿಲ್ಲೆಯ ಭಿಸಿಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಕೈಬಿಡಲು ಚೀನಾ ಒಪ್ಪಿಕೊಂಡಿದೆ.
ಚೀನಾದ ನಿರ್ಧಾರವನ್ನು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರು ಮಾಧ್ಯಮ ಸಂವಾದದ ಸಂದರ್ಭ ಸ್ಪಷ್ಟಪಡಿಸಿದ್ದಾರೆ.
ಜ.6ರಂದು ಉಭಯ ದೇಶಗಳ ನಡುವೆ ನಡೆದ ಸಭೆಯ ಬಳಿಕ ಈ ಬೆಳವಣಿಗೆ ನಡೆದಿದೆ.
‘ರಸ್ತೆ ನಿರ್ಮಾಣಕ್ಕಾಗಿ ಚೀನಾ ಕಾರ್ಮಿಕರು ಭಾರತದ ಗಡಿಯೊಳಗೆ ಆಕ್ರಮವಾಗಿ ನುಸುಳಿದ ಘಟನೆ ಇದೀಗ ಬಗೆ ಹರಿದಿದೆ’ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ. ಚೀನಾ ಕಾರ್ಮಿಕರಿಂದ ವಶಪಡಿಸಿಕೊಳ್ಳಲಾದ ಪರಿಕರಗಳನ್ನು ಅವರಿಗೆ ವಾಪಾಸ್ ಕೊಡಲಾಗಿದೆ ಎಂದಿದ್ದಾರೆ.
‘ಗಡಿ ಭದ್ರತಾ ಸಿಬ್ಬಂದಿಗಳ ನಡುವೆ ನಡೆದ ಸಭೆಯ ಬಳಿಕ ಸಮಸ್ಯೆ ಬಗೆ ಹರಿದಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.