ತಿರುವನಂತಪುರಂ: ಶೀಘ್ರದಲ್ಲೇ ಶಬರಿಮಲೆ ಯಾತ್ರೆಗೆ ತೆರಳುವ ಮಹಿಳಾ ಭಕ್ತರು ವಯಸ್ಸಿನ ದಾಖಲೆಯನ್ನು ನೀಡುವುದು ಕಡ್ಡಾಯವಾಗಲಿದೆ. ಈ ದೇಗುಲದೊಳಗೆ 10-50 ವರ್ಷ ಪ್ರಾಯದ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಭಕ್ತರು ಇಲ್ಲಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅನಗತ್ಯ ವಾಗ್ವಾದಗಳನ್ನು ತಡೆಯುವ ಸಲುವಾಗಿ ಶಬರಿಮಲೆ ದೇಗುಲ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನಿಖರ ವಯಸ್ಸಿನ ದಾಖಲೆಯನ್ನು ನೀಡುವುದರಿಂದ ಮಹಿಳೆಯರ ಮತ್ತು ಪೊಲೀಸರ ನಡುವೆ ನಡೆಯಬಹುದಾದ ಅನಗತ್ಯ ವಾಗ್ ಸಮರಗಳಿಗೆ ಅಂತ್ಯ ಬೀಳಲಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.