ನವದೆಹಲಿ: ಸಮಾಜ ಸುಧಾರಕಿ ಮತ್ತು ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಜಯಂತಿಯ ಅಂಗವಾಗಿ ಸಾವಿತ್ರಿಬಾಯಿ ಫುಲೆಗೆ ತಲೆ ಬಾಗುತ್ತೇನೆ. ಆಕೆಯ ಬದುಕು ಬಡವರ, ದೀನರ ಕಲ್ಯಾಣಕ್ಕಾಗಿ ಅರ್ಪಿತಗೊಂಡಿತ್ತು. ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಅವರು ಹೆಚ್ಚಿನ ಪ್ರಮುಖ್ಯತೆ ನೀಡಿದರು. ಆಕೆಯ ಸಿದ್ಧಾಂತಗಳಿಂದ ಹೆಚ್ಚು ಮಾರ್ಗದರ್ಶನ ಪಡೆದುಕೊಂಡಿದ್ದೇವೆ, ಆಕೆಯ ದೂರದೃಷ್ಟಿತ್ವವನ್ನು ನನಸಾಗಿಸಲು ಶ್ರಮಿಸುತ್ತಿದ್ದೇವೆ’ ಎಂದರು.
1831ರ ಜನವರಿ 3ರಂದು ಮಹರಾಷ್ಟ್ರದಲ್ಲಿ ಜನಿಸಿದ ಫುಲೆ ಜಾತಿ, ಲಿಂಗ ತಾರತಮ್ಯದ ವಿರುದ್ಧ ಸಾಕಷ್ಟು ಹೋರಾಟ ನಡೆಸಿದ್ದಾರೆ. 1897ರ ಮಾರ್ಚ್ 10ರಂದು ಇವರು ಇಹಲೋಕ ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.