ನವದೆಹಲಿ: ಪಾಕಿಸ್ಥಾನ ಗಡಿಯಲ್ಲಿ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆ, ಭಯೋತ್ಪಾದನ ಕೃತ್ಯಗಳ ಸಮರ್ಥ ನಿಭಾಯಿಸುವಿಕೆಯ ಬಗ್ಗೆ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸದಾ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುತ್ತದೆ.
ಆದರೆ ಇತ್ತೀಚಿನ ಅಧಿಕೃತ ದಾಖಲೆಯ ಪ್ರಕಾರ ಉಗ್ರ ಕೃತ್ಯಗಳನ್ನು ನಿಭಾಯಿಸಿದ ರೀತಿಯಲ್ಲಿ ಎನ್ಡಿಎ ಮತ್ತು ಯುಪಿಎಗಳ ನಡುವೆ ಸಾಕಷ್ಟು ಅಂತರವಿದೆ.
2014-17ರವರೆಗಿನ ಎನ್ಡಿಎ ಆಡಳಿತದಲ್ಲಿ 1,094 ಉಗ್ರ ಕೃತ್ಯಗಳು ನಡೆದಿವೆ. ಯುಪಿಎಯ 2010-2013 ನಡುವಣ ಆಡಳಿತದಲ್ಲಿ ಒಟ್ಟು 1,218 ಉಗ್ರ ಕೃತ್ಯಗಳು ನಡೆದಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚು ಅಂದರೆ 580 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಬಿಜೆಪಿ ಅವಧಿಯಲ್ಲಿ 100 ನಾಗರಿಕ ಹತ್ಯೆಯಾಗಿದ್ದರೆ, ಯುಪಿಎ ಅವಧಿಯಲ್ಲಿ 108ನಾಗರಿಕರ ಹತ್ಯೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.