ನವದೆಹಲಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್(ಎನ್ಆರ್ಸಿ) ಮೂಲಕ ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇನ್ನೊಂದೆಡೆ ಬಿಎಸ್ಎಫ್ ಗಡಿಯಲ್ಲಿ ಅಂಡರ್ವಾಟರ್ ಸೆನ್ಸಾರ್ಗಳನ್ನು ಅಳವಡಿಸಿ ಅಕ್ರಮ ವಲಸಿಗರ ಮೇಲೆ ಕಣ್ಣಿಡಲು ಮುಂದಾಗಿದೆ.
ಬಾಂಗ್ಲಾದಿಂದ ಅಕ್ರಮವಾಗಿ ಅಂಡರ್ವಾಟರ್ ವಾರ್ಗವಾಗಿ ವಲಸಿಗರು ಭಾರತದೊಳಗೆ ನುಸುಳುತ್ತಿದ್ದಾರೆ. ಇದನ್ನು ಪತ್ತೆ ಮಾಡುವ ಸಲುವಾಗಿ ಬಿಎಸ್ಎಫ್ ಅಂಡರ್ವಾಟರ್ ರಿಮೋಟ್ ಆಪರೇಟೆಡ್ ವೆಹ್ಹಿಕಲ್ಗಳನ್ನು ಕಣ್ಗಾವಲಿಗಾಗಿ ನಿಯೋಜಿಸುತ್ತಿದೆ.
ಭಾರತ ಮತ್ತು ಬಾಂಗ್ಲಾ ನಡುವೆ 2,979 ಕಿಲೋಮೀಟರ್ ಗಡಿಯಿದೆ ಮತ್ತು 1,116 ಕಿಲೋಮೀಟರ್ ನಡಿ ಬೌಂಡರಿ ಇದೆ, ಉಭಯ ದೇಶಗಳು ಬ್ರಹ್ಮಪುತ್ರ ಸೇರಿದಂತೆ ಒಟ್ಟು 54 ನದಿಗಳನ್ನು ಪರಸ್ಪರ ಹಂಚಿಕೊಂಡಿದೆ.
ಇದೀಗ ಅಂಟರ್ ವಾಟರ್ ಸೆನ್ಸಾರ್, ಹೈಡ್ರೋಫೋನ್ಗಳಂತಹ ತಂತ್ರಜ್ಞಾನಗಳನ್ನು ಬಳಸಿ ಬಾಂಗ್ಲಾದಿಂದ ವಲಸಿಗರು ಪಶ್ಚಿಮಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರಗಳಿಗೆ ಆಗಮಿಸದಂತೆ ನೋಡಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.