ನವದೆಹಲಿ: ನವಜಾತ ಶಿಶುಗಳು ಮತ್ತು 5 ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಪಾಸ್ಪೋರ್ಟ್ ಮಂಡಳಿಗಳಿಗೆ ಬಯೋಮೆಟ್ರಿಕ್ ನೀಡುವ ಅಗತ್ಯವಿಲ್ಲ.
ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಗ್ ಅವರು ಈ ಬಗ್ಗೆ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದು, ‘5 ವರ್ಷದೊಳಗಿನ ಮಕ್ಕಳಿಗೆ ಪಾಸ್ಪೋರ್ಟ್ಗಾಗಿ ಬಯೋಮೆಟ್ರಿಕ್ ನೀಡುವುದರಿಂದ ವಿನಾಯಿತಿ ಕೊಡಲಾಗಿದೆ. ಆದರೆ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ಈ ಮಕ್ಕಳು ದೈಹಿಕವಾಗಿ ಹಾಜರಿದ್ದು, ಪಾಸ್ಪೋರ್ಟ್ ಪ್ರಿಂಟಿಂಗ್ಗಾಗಿ ಫೋಟೋ ನೀಡಬೇಕಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಸ್ಪೋರ್ಟ್ ನೀಡುವ ಸಂದರ್ಭ ಪುಟಾಣಿ ಮಕ್ಕಳೂ ಹಾಜರಿದ್ದು, ಬಯೋಮೆಟ್ರಿಕ್ ನೀಡಬೇಕಾಗಿತ್ತು. ಇದೀಗ ಆ ಸಂಕಷ್ಟ ತಪ್ಪಿದೆ. ಆದರೆ ಫೋಟೋ ತೆಗೆಸಿಕೊಳ್ಳಬೇಕಾದುದು ಅನಿವಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.