ಬೆಂಗಳೂರು: ಚಪ್ಪಲಿ ಖರೀದಿಸಿ ಬಿಲ್ ಪಾವತಿ ಮಾಡಲಿಲ್ಲ ಎಂದು ಆರೋಪಿಸಿ ಬಾಂಗ್ಲಾದೇಶದ ಮಹಿಳೆಯೊಬ್ಬಳನ್ನು ನಗ್ನಗೊಳಿಸಿ ಆಕೆಯ ಬಳಿಯಿದ್ದ ಹಣವನ್ನು ದೋಚಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯೆ, ಸಾಮಾಜಸೇವಕಿ ಎಂದು ಹೇಳಿಕೊಳ್ಳುತ್ತಿರುವ ಹೆಬ್ಬಗೋಡಿ ನಿವಾಸಿ ಮಂಜುಳಾ ಎಂಬಾಕೆಯನ್ನು ಬಂಧಿಸಲಾಗಿದೆ.
ರಶೀದಾ ಎಂಬ ಬಾಂಗ್ಲಾ ಮಹಿಳೆ 15 ದಿನಗಳ ಹಿಂದೆ ತಮ್ಮ ಪತಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ನಾರಾಯಣ ಹೃದಯಾಲಯಕ್ಕೆ ಬಂದಿದ್ದರು, ಈ ಆಸ್ಪತ್ರೆಯ ಸಮೀಪದಲ್ಲೇ ಇರುವ ಡಿಮಾರ್ಟ್ಗೆ ತೆರಳಿ ಚಪ್ಪಲಿ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಆದರೆ ಚಪ್ಪಲಿಗೆ ಹಣ ಪಾವತಿ ಮಾಡುವುದನ್ನು ಮರೆತಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ಇವರನ್ನು ವ್ಯವಸ್ಥಾಪಕರ ಬಳಿ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ದಿಢೀರ್ ಪ್ರತ್ಯಕ್ಷಳಾದ ಮಂಜುಳಾ ತಾನು ಹೆಬ್ಬಗೋಡಿ ಇನ್ಸ್ಪೆಕ್ಟರ್ ಎಂದು ಹೇಳಿದ್ದಾಳೆ. ರಶೀದ ಅವರು ತಾನು ಮರೆತು ಬಿಲ್ ಕಟ್ಟಿಲ್ಲ, ಈಗ ಪಾವತಿ ಮಾಡುತ್ತೇನೆ ಎಂದು ಎಷ್ಟೇ ಹೇಳಿದರೂ ಕೇಳದೆ ಈಕೆ ಅವರ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಾಳೆ. ಅಲ್ಲದೇ ಅವರ ಬಳಿಯಿದ್ದ 60ಸಾವಿರ ರೂಪಾಯಿಯನ್ನು ದೋಚಿದ್ದಾಳೆ.
ಈ ಘಟನೆಯನ್ನು ರಶೀದ ನರ್ಸ್ಗಳ ಬಳಿ ಹೇಳಿಕೊಂಡಿದ್ದಾರೆ. ತಕ್ಷಣ ರಶೀದ ಸಹಾಯಕ್ಕೆ ಧಾವಿಸಿದ ಆಸ್ಪತ್ರೆ ಸಿಬ್ಬಂದಿ ಮಾಲ್ ವ್ಯವಸ್ಥಾಪಕರ ಬಳಿ ವಿಚಾರಿಸಿದ್ದಾರೆ. ಈ ವೇಳೆ ಮಂಜುಳಾ ಕೃತ್ಯ ಹೊರ ಬಂದಿದೆ.
ಇದೀಗ ಮಾಲ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ, ಮಂಜುಳಾಳನ್ನು ಬಂಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.