ನವದೆಹಲಿ: 40 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಇತ್ತೀಚಿಗಷ್ಟೇ ಮುಂಬಯಿ ಆಸ್ಪತ್ರೆಯಲ್ಲಿ ನಿಧನರಾದ ದಾದಿ ಅರುಣಾ ಶ್ಯಾನ್ಭೋಗ್ ಅವರ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ ಆರೋಪಿ ಪ್ರಸ್ತುತ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ.
ಪತ್ರಕರ್ತರೊಬ್ಬರು ಈತನಿರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಆತನೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಆದರೆ ಆತ 40 ವರ್ಷಗಳ ಹಿಂದೆ ಏನು ಆಯಿತು ಎಂಬುದು ನನಗೆ ನೆನಪೇ ಇಲ್ಲ ಎಂದಿದ್ದಾನೆ.
ಸೋಹನ್ಲಾಲ್ ಭಾರ್ತ ವಾಲ್ಮೀಕಿ ಎಂಬಾತ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಅರುಣಾ ಅವರ ಕುತ್ತಿಗೆಯನ್ನು ನಾಯಿಯನ್ನು ಕಟ್ಟಿ ಹಾಕುವ ಸರಪಳಿಯಿಂದ ಬಿಗಿದು ಹಲ್ಲೆ ನಡೆಸಿದ್ದ, ಮಾತ್ರವಲ್ಲ ಅತ್ಯಾಚಾರವೆಸಗಿದ್ದ. ಇದರಿಂದಾಗಿ ಬರೋಬ್ಬರಿ 40 ವರ್ಷಗಳ ಕಾಲ ಕೋಮಾದಲ್ಲೇ ಜೀವಿಸಿ ಅರುಣಾ ಇತ್ತೀಚಿಗೆ ಮೃತಪಟ್ಟರು.
‘ಕೃತ್ಯಕ್ಕೆ ಕೆಲಕಾಲ ಜೈಲುವಾಸ ಅನುಭವಿಸಿದ್ದ ಸೋಹನ್ಲಾಲ್ ಇದೀಗ ಉತ್ತರಪ್ರದೇಶದ ಪರ್ಪ ಎಂಬ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಈತ ಘಟನೆ ಬಗ್ಗೆ ಹೇಳಲು ನಿರಾಕರಿಸುತ್ತಿದ್ದಾನೆ, ಅಲ್ಲದೇ ‘ಈ ಪ್ರಕರಣವನ್ನು ಅತ್ಯಾಚಾರ ಎಂದು ನೀವೆಲ್ಲರು ಏಕೆ ಕರೆಯುತ್ತಿದ್ದೀರಿ’ ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.
ಇದೀಗ ಈತನ ಮೇಲೆ ಹೊಸದಾಗಿ ಕೊಲೆ ಪ್ರಕರಣ ಹೂಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಂಬಯಿಯ ಜಂಟಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.