ಮನಿಲ: ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಅಷಿಯಾನ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಈ ಎಲ್ಲಾ ನಾಯಕರು ಪುರಸ್ಕರಿಸಿದ್ದಾರೆ.
ಅಷಿಯಾನ್-ಇಂಡಿಯಾ ಸಮಿತ್ನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಷಿಯಾನ್ನೊಂದಿಗೆ ಭಾರತದ ಬಾಂಧವ್ಯಕ್ಕೆ 25 ವರ್ಷವಾದ ಹಿನ್ನಲೆಯ ಸ್ಮರಣಾರ್ಥವಾಗಿ ನಾಯಕರನ್ನು ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಗಳಾಗಿ ಆಹ್ವಾನಿಸುತ್ತಿರುವುದಾಗಿ ತಿಳಿಸಿದರು.
ಭಾರತ-ಅಷಿಯಾನ್ನ ವಿಶೇಷ ಸ್ಮರಣಿಕ ಸಮಿತ್ ಮುಂದಿನ ಜನವರಿ 25ರಂದು ನವದೆಹಲಿಯಲ್ಲಿ ಜರುಗಲಿದೆ.
ಮೋದಿಯ ಆಹ್ವಾನವನ್ನು ಎಲ್ಲಾ ಅಷಿಯಾನ್ ನಾಯಕರುಗಳು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಪ್ರೀತಿ ಸರನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.