ನೊಯ್ಡಾ: ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆಯಲ್ಲಿದ್ದು ಅಸಾಧಾರಣ ಸೇವೆಯನ್ನು ನೀಡಿರುವ ನಾಲ್ಕು ಕಾಲಿನ ಹೀರೋಗಳಾದ ಕುದುರೆ ಮತ್ತು ಶ್ವಾನಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸನ್ಮಾನಿಸಿದರು.
ಚಂಡೀಗಢದ ಮೂಲ ತರಬೇತಿ ಕೇಂದ್ರದಲ್ಲಿನ ಕುದುರೆ ‘ಬ್ಲ್ಯಾಕ್ ಬ್ಯೂಟಿ’ಗೆ ಅತ್ಯುತ್ತಮ ಕುದುರೆ ಮತ್ತು ಛತ್ತೀಸ್ಗಢದಲ್ಲಿ ನಿಯೋಜನೆಗೊಂಡಿರುವ 29 ಬೆಟಾಲಿಯನ್ನ ಶ್ವಾನ ‘ಮಚ್ಲಿ’ಗೆ ಅತ್ಯುತ್ತಮ ಶ್ವಾನ ಪದಕವನ್ನು ನೀಡಿ ಅವರು ಗೌರವಿಸಿದರು.
ಬ್ಲ್ಯಾಕ್ ಬ್ಯೂಟಿ ಇತ್ತೀಚಿಗೆ ನಡೆದ ನ್ಯಾಷನಲ್ ರೈಡಿಂಗ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಮಚ್ಲಿ ಇತ್ತೀಚಿಗೆ 5 ಕೆಜಿ ಬಾಂಬ್ ಪತ್ತೆ ಹಚ್ಚಿ ಹಲವು ಯೋಧರ ಜೀವ ಉಳಿಸಿತ್ತು.
ಗಡಿಯಲ್ಲಿನ ಯೋಧರಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸುವ ಕಾರ್ಯದಲ್ಲಿ ಕುದುರೆಗಳು ನಿರತವಾಗಿರುತ್ತದೆ ಮತ್ತು ಶ್ವಾನಗಳು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಾಂಬ್ ಪತ್ತೆ ಮಾಡಲು ಸಹಾಯ ಮಾಡುತ್ತವೆ.
ಐಟಿಬಿಪಿಯ 56ನೇ ರೈಸಿಂಗ್ ಡೇನಲ್ಲಿ ಭಾಗವಹಿಸಿದ್ದ ರಾಜನಾಥ್ ಸಿಂಗ್ ಈ ನಾಲ್ಕು ಕಾಲಿನ ವಿಶೇಷ ಯೋಧರ ಕುತ್ತಿಗೆಗೆ ಪದಕಗಳನ್ನು ಹಾಕಿ ಸನ್ಮಾನ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.