ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಸೆಲ್ಫಿಗಳ ಬಗ್ಗೆ ಟೀಕೆ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಮೊದಲು ಜನರಿಗಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದೆ.
‘ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಜನರು ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿಲ್ಲ ಎಂಬ ಚಿಂತೆ ನಿತೀಶ್ ಕುಮಾರ್ಗೆ, ಅದಕ್ಕೆ ನಾವೇನು ಮಾಡಲಾಗುತ್ತದೆ? ಜನರು ಪ್ರಭಾವಿತರಾಗಿ ನಿಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಕಾರ್ಯ ಮಾಡಿ ಎಂದು ಸಲಹೆ ನೀಡುತ್ತೇವೆ’ ಎಂದು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಮೋದಿಯನ್ನು ಟೀಕಿಸಿದ್ದ ನಿತೀಶ್ ’ಜನರು ಸೆಲ್ಫ್ಲೆಸ್ ನಾಯಕತ್ವಕ್ಕೆ ಮತ ಹಾಕಿದ್ದಾರೆ, ಬದಲಿಗೆ ಅವರು ಸೆಲ್ಫಿ ನಾಯಕತ್ವ ಪಡೆದುಕೊಂಡಿದ್ದಾರೆ’ ಎಂದಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ರವಿಶಂಕರ್ ’ಭಾರತದಲ್ಲಿ ೧೦೦ ಕೋಟಿ ಮೊಬೈಲ್ಗಳಿವೆ, ಇದು ತಂತ್ರಜ್ಞಾನಗಳ ಯುಗ. ಮೋದಿ ದೇಶ, ವಿದೇಶ ಎಲ್ಲಿಗೆ ಹೋದರೂ ಭಾರತೀಯರು, ವಿದೇಶಿಯರು, ಪತ್ರಕರ್ತರು, ನಾಯಕರು, ಮಕ್ಕಳು, ಜನರು, ಡ್ರೈವರುಗಳು ಎಲ್ಲರೂ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಮುಗಿ ಬೀಳುತ್ತಾರೆ’ ಎಂದಿದ್ದಾರೆ.
ಇದು ಮೋದಿಯವರ ಕ್ರಿಯಾಶೀಲ ನಾಯಕತ್ವಕ್ಕೆ ನಿದರ್ಶನ, ಅವರು ಸಾಮಾನ್ಯ ಜನರ ಪ್ರಧಾನಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.