ನವದೆಹಲಿ: ಸರ್ಕಾರ ತೆಗೆದುಕೊಂಡ ರಚನಾತ್ಮಕ ಸುಧಾರಣೆಗಳಿಂದಾಗಿ ಮಧ್ಯಮ ಮತ್ತು ಸುದೀರ್ಘಾವಧಿಯಲ್ಲಿ ಭಾರತದ ಆರ್ಥಿಕತೆ ಬಲಿಷ್ಠ ಪಥದಲ್ಲಿದೆ. ಜಿಎಸ್ಟಿ ಮತ್ತು ನೋಟ್ ಬ್ಯಾನ್ ಕ್ರಮದಿಂದಾಗಿ ಪ್ರಸ್ತುತ ಆರ್ಥಿಕತೆಯಲ್ಲಿ ಕುಸಿತವಾಗಿದೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟೆನ್ ಲೆಗಾರ್ಡ್ ಹೇಳಿದ್ದಾರೆ.
ನೋಟ್ ಬ್ಯಾನ್ ಮತ್ತು ಜಿಎಸ್ಟಿಯ ಪರಿಣಾಮಗಳಿಮದಾಗಿ ಐಎಂಎಫ್ ಭಾರತದ ಪ್ರಗತಿಯ ಏರಿಕೆಯನ್ನು 2017-18ರ ಸಾಲಿನಲ್ಲಿ ಅಂದಾಜಿಸಿದ್ದ ಶೇ.7.2ಕ್ಕಿಂತ ಶೇ.6.7ಕ್ಕೆ ಇಳಿಸಿದೆ.
ಮುಂದಿನ ವರ್ಷ ಭಾರತ ಮತ್ತೆ ಅತೀ ವೇಗದ ಆರ್ಥಿಕತೆಯ ಸ್ಥಾನವನ್ನು ಮರಳಿ ಪಡೆಯಲಿದೆ. ಅಲ್ಲದೇ ಅಂದಾಜಿಸಿದ್ದ ಶೇ.7.6ರಷ್ಟು ಪ್ರಗತಿ ದರ ಹೊಂದಲಿದೆ ಎಂದು ಕ್ರಿಸ್ಟಿನೆ ಅಭಿಪ್ರಾಯಪಟ್ಟಿದ್ದಾರೆ.
ಇದುವರೆಗೆ ತೆಗೆದುಕೊಂಡ ಸುಧಾರಣಾ ಕ್ರಮಗಳಿಂದಾಗಿ ಮಧ್ಯಮಾವಧಿಯಲ್ಲಿ ಭಾರತದ ಪ್ರಗತಿ ದರ ಶೇ.8ರಷ್ಟರಾಗಬಹುದು ಎಂಬ ನಿರೀಕ್ಷೆ ಐಎಂಎಫ್ನದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.