ಬೆಂಗಳೂರು: ಕಳೆದ 80 ವರ್ಷಗಳಲ್ಲಿ ಬಿಡುಗಡೆಗೊಂಡ ಕನ್ನಡದ ಕ್ಲಾಸಿಕ್ ಸಿನಿಮಾಗಳನ್ನು ಸಂಗ್ರಹಿಸಿ ಅವುಗಳನ್ನು ಡಿಜಿಟಲೀಕರಣಗೊಳಿಸಲು ಕನ್ನಡ ಚಲನಚಿತ್ರ ಅಕಾಡಮಿ ಮುಂದಾಗಿದೆ.
1934ರಲ್ಲಿ ಕನ್ನಡದ ಮೊತ್ತ ಮೊದಲ ಟಾಕಿ ಸಿನಿಮಾ ಸತಿ ಸುಲೋಚನ ಬಿಡುಗಡೆಗೊಂಡಿತ್ತು. ಆ ಬಳಿಕದಿಂದ ಸಾವಿರಾರು ಸಿನಿಮಾಗಳು ಬಿಡುಗಡೆಯಾಗಿವೆ. ಇವೆಲ್ಲವೂ ಇದೀಗ ಡಿಜಿಟಲ್ ಆಗುವ ಮೂಲಕ ಹೊಸ ಬದುಕನ್ನು ಪಡೆದುಕೊಳ್ಳಲಿವೆ.
ಸುಮಾರು 1500 ಕನ್ನಡ ಸಿನಿಮಾಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಕೆಲವೊಂದು ಸಿನಿಮಾಗಳ ಕಾಪಿಗಳು ಹಾನಿಗೊಳಗಾಗಿದೆ, ಇನ್ನು ಕೆಲವೊಂದು ಸಿನಿಮಾಗಳ ಕಾಪಿ ಚಲನಚಿತ್ರ ಅಕಾಡಮಿಯ ಬಳಿ ಇಲ್ಲ.
4 ಸದಸ್ಯರುಗಳುಳ್ಳ ಸಮಿತಿಯನ್ನು ಕನ್ನಡ ಚಲನಚಿತ್ರ ಅಕಾಡಮಿ ರಚಿಸಿದ್ದು, ಕನ್ನಡ ಕ್ಲಾಸಿಕ್ ಸಿನಿಮಾಗಳನ್ನು ಪತ್ತೆ ಮಾಡಿ ಅವುಗಳ ನೆಗೆಟಿವ್ ಸಂಗ್ರಹಿಸುವುದು ಇವರ ಕಾರ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.