ನವದೆಹಲಿ: ದೇಶದಾದ್ಯಂತ ಸಂಚಲನ ಮೂಡಿಸಿದ್ದ 14 ವರ್ಷದ ಬಾಲಕಿ ಆರುಷಿಯ ಮತ್ತು ಮನೆಗೆಲಸದ ಹೇಮಂತ್ ಕೊಲೆ ರಹಸ್ಯ ರಹಸ್ಯವಾಗಿಯೇ ಉಳಿದು ಬಿಟ್ಟಿದೆ. ಆಕೆಯ ಕೊಲೆಯ ಆರೋಪಿಗಳೆಂದು ಜೈಲು ಪಾಲಾಗಿದ್ದ ಆಕೆಯ ಪೋಷಕರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಆರೋಪ ಮುಕ್ತಗೊಳಿಸಿದೆ.
4 ವರ್ಷಗಳ ಕಾಲ ಮಗಳ ಕೊಲೆಯ ಆರೋಪ ಹೊತ್ತು ಜೈಲು ಪಾಲಾಗಿದ್ದ ನೂಪುರ್ ಮತ್ತು ರಾಜೇಶ್ ತಲ್ವಾರ್ ದಂಪತಿ ಕೊನೆಗೂ ಆರೋಪ ಮುಕ್ತಗೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಜೈಲಿನಿಂದ ಹೊರಕ್ಕೆ ಬರಲಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಮತ್ತು ತನಿಖೆಯಲ್ಲಿನ ಲೋಪಗಳನ್ನು ಪರಿಗಣಿಸಿ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.