ನವದೆಹಲಿ: ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಮರೈನ್ ಯೇಡ್ಸ್ ಟು ನೇವಿಗೇಶನ್ ಆಂಡ್ ಲೈಟ್ಹೌಸ್ ಅಥಾರಿಟೀಸ್(IALA)ನ ಸ್ಥಾನಮಾನವನ್ನು ಎನ್ಜಿಓನಿಂದ ಐಜಿಓ (ಇಂಟರ್ ಗವರ್ನ್ಮೆಂಟಲ್ ಆರ್ಗನೈಜೇಶನ್)ಗೆ ಬದಲಾಗಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಇದರಿಂದಾಗಿ ಹಡಗುಗಳ ಸುರಕ್ಷಿತ, ಆರ್ಥಿಕ ಮತ್ತು ಸಮರ್ಥ ಚಲನೆಗೆ ಸಹಕಾರಿಯಾಗಲಿದೆ, ಅಲ್ಲದೇ ಇದು ಐಎಎಲ್ಎಯನ್ನು ಇಂಟರ್ನ್ಯಾಷನಲ್ ಮರಿಟೈಮ್ ಆರ್ಗನೈಜೇಶನ್ (ಐಎಂಓ) ಮತ್ತು ಇಂಟರ್ನ್ಯಾಷನಲ್ ಹೈಡ್ರೋಗ್ರಾಫಿಕ್ ಆರ್ಗನೈಝೇಶನ್ನಡಿ ತರಲಿದೆ.
1957ರಲ್ಲಿ ಸ್ಥಾಪನೆಗೊಂಡಿರುವ ಐಎಎಲ್ಎ ಫ್ರಾನ್ಸ್ನ ಸೈಂಟ್.ಜರ್ಮನೈನ್ ಲಾಯೆದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. 24 ರಾಷ್ಟ್ರಗಳು ಇದರ ಸದಸ್ಯರಾಗಿದ್ದು, ಭಾರತವೂ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.