ನವದೆಹಲಿ: ದೇಶದ ಇಂಧನ ವಲಯದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ. ಇದಕ್ಕಾಗಿ ವಿಶ್ವದ ಪ್ರಮುಖ ಇಂಧನ ಕಂಪನಿಗಳಿಂದ ಕೇಂದ್ರಿತ ಸಲಹೆಗಳನ್ನೂ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
ವಿಶ್ವದ ಮೂರನೇ ಅತೀ ಹೆಚ್ಚು ತೈಲ ಗ್ರಾಹಕರನ್ನು ಹೊಂದಿರುವ ದೇಶದ ಮಾರುಕಟ್ಟೆ ಗಾತ್ರವನ್ನು ಬಳಸಿ ತೈಲ ರಫ್ತುದಾರರೊಂದಿಗೆ ಉತ್ತಮ ಡೀಲ್ಗಳನ್ನು ಕುದುರಿಸಲು ಮತ್ತು ದೇಶದ ಎಕ್ಸ್ಪ್ಲೊರೇಶನ್ ಮತ್ತು ರಿಫೈನಿಂಗ್ ಇಂಡಸ್ಟ್ರೀಸ್ಗೆ ಹೂಡಿಕೆಯನ್ನು ಆಕರ್ಷಿಸಲು ಅವರು ಮುಂದಾಗಿದ್ದಾರೆ.
ಮಂಗಳವಾರ ಅಂತ್ಯಗೊಂಡ ಮೂರು ದಿನಗಳ ಇಂಡಿಯಾ ಎನರ್ಜಿ ಫೋರಂನಲ್ಲಿ ರಾಸ್ನೆಫ್ಟ್, ಬಿಪಿ, ಎಕ್ಸಾನ್ ಮೊಬಿಲ್, ರಿಲಾಯನ್ಸ್ ಇಂಡಸ್ಟ್ರೀಸ್, ಸೌದಿ ಅರಮ್ಕೋ, ರಾಯಲ್ ಡಚ್ ಶೆಲ್, ವೇದಾಂತ ಮುಂತಾದ ಕಂಪನಿಗಳ ಕಾರ್ಯನಿರ್ವಾಹಕರು ಮೋದಿಯನ್ನು ಭೇಟಿಯಾಗಿದ್ದಾರೆ.
ಈ ಸಂದರ್ಭ ಮೋದಿ ಎನರ್ಜಿ ಸೆಕ್ಟರ್ನಲ್ಲಿ ತಂದ ಸುಧಾರಣೆಗಳನ್ನು ಇವರು ಶ್ಲಾಘಿಸಿದ್ದಾರೆ ಎಂದು ಪಿಎಂಒ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.