ನವದೆಹಲಿ: ಮೀಸಲಾತಿಯನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡುವ ಸಲುವಾಗಿ ಇತರ ಹಿಂದುಳಿದ ಜಾತಿಗಳನ್ನೂ ಹೇಗೆ ಇದರಲ್ಲಿ ಉಪವರ್ಗೀಕರಣಗೊಳಿಸಬಹುದು ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಐದು ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ದೆಹಲಿ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಿ ಈ ವರ್ಷ ನಿವೃತ್ತರಾಗಿರುವ ಜಿ.ರೋಹಿಣಿ ಅವರು ಈ ಸಮಿತಿಯ ನೇತೃತ್ವವನ್ನು ವಹಿಸಲಿದ್ದಾರೆ.
ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಎನಿಸಿರುವ ಮೀಸಲಾತಿ ಹಂಚಿಕೆಯ ಬಗೆಗಿನ ತನ್ನ ವರದಿಯನ್ನು ಈ ಸಮಿತಿ ಮೂರು ತಿಂಗಳೊಳಗೆ ಸಲ್ಲಿಕೆ ಮಾಡಲಿದೆ.
ಮೀಸಲಾತಿ ಸೌಲಭ್ಯವನ್ನು ಇನ್ನಷ್ಟು ಹಿಂದುಳಿದ ವರ್ಗಗಳಿಗೆ ವಿಸ್ತರಣೆ ಮಾಡುವ ಉದ್ದೇಶದಿಂದ ಈ ಸಮಿತಿಯನ್ನು ರಚನೆ ಮಾಡಲಾಗಿದೆ. ಪ್ರಸ್ತುತ ಮೀಸಲಾತಿಯಲ್ಲಿ ಉಪವರ್ಗೀಕರಣವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.