ಬೆಂಗಳೂರು: ದೇಶದಾದ್ಯಂತ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. 2018ರ ಮಾರ್ಚ್ ತಿಂಗಳೊಳಗೆ ರಾಜ್ಯ ಬಯಲುಶೌಚ ಮುಕ್ತಗೊಳ್ಳುವತ್ತ ದಾಪುಗಾಲು ಇಡುತ್ತಿದೆ.
ಈಗಾಗಲೇ ರಾಜ್ಯದ ಶೇ.76ರಷ್ಟು ಗ್ರಾಮೀಣ ಜನತೆ ಶೌಚಾಲಯವನ್ನು ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮುಂದಿನ ಮಾರ್ಚ್ವೊಳಗೆ ಎಲ್ಲಾ ಗ್ರಾಮೀಣ ಮತ್ತು ನಗರದ ಮನೆಗಳಿಗೆ ಟಾಯ್ಲೆಟ್ ನೀಡುವ ಗುರಿಯನ್ನು ಆಡಳಿತ ಇಟ್ಟುಕೊಂಡಿದೆ.
ಕಲಬುರ್ಗಿ, ರಾಯಚೂರು, ಬೀದರ್, ವಿಜಯಪುರ, ಯಾದಗಿರಿ ಜಿಲ್ಲೆಗಳು ಟಾಯ್ಲೆಟ್ ವಿಚಾರದಲ್ಲಿ ಕಳಪೆ ಸಾಧನೆ ಮಾಡಿದ್ದು, ಇವುಗಳತ್ತ ಹೆಚ್ಚಿನ ಗಮನವಹಿಸುವ ಅಗತ್ಯವಿದೆ.
ಅ.2ರಂದು ಸಿಎಂ ಸಿದ್ದರಾಮಯ್ಯನವರು ಶೇ.100ರಷ್ಟು ಸಾಧನೆ ಮಾಡಿದ 1,900 ಗ್ರಾಮಪಂಚಾಯತ್ಗಳಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿ ಸನ್ಮಾನಿಸಿದ್ದಾರೆ. 5 ಲಕ್ಷ ನಗದನ್ನು ಇದು ಒಳಗೊಂಡಿದೆ.
ಕಳೆದ 4 ವರ್ಷ ಮತ್ತು 4 ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 31.12 ಲಕ್ಷ ಟಾಯ್ಲೆಟ್ ನಿರ್ಮಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.