ಶ್ರೀನಗರ: ಶ್ರೀನಗರದಲ್ಲಿನ ಬಿಎಸ್ಎಫ್ ಶಿಬಿರದ ಮೇಲೆ ಮಂಗಳವಾರ ಮುಂಜಾನೆ ಉಗ್ರರ ದಾಳಿ ನಡೆದಿದೆ. ಈ ವೇಳೆ 3 ಮಂದಿ ಯೋಧರಿಗೆ ಗಾಯಗಳಾಗಿದೆ. ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಶಿಬಿರದ ಆವರಣದೊಳಗೆ ಈಗಲೂ ಗುಂಡಿನ ಚಕಮಕಿ ಮುಂದುವರೆದಿದ್ದು, ಮುಂಜಾಗೃತ ಕ್ರಮವಾಗಿ ದಾಳಿ ನಡೆದ ಸಮೀಪದಲ್ಲಿರುವ ಶ್ರೀನಗರ ಏರ್ಪೋರ್ಟ್ನ್ನು ಮುಚ್ಚಲಾಗಿದೆ.
ಪಾಕಿಸ್ಥಾನ ಮೂಲದ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಬಿಎಸ್ಎಫ್ನ 182ನೇ ಬೆಟಾಲಿಯನ್ ಇದ್ದ ಶಿಬಿರದ ಮೇಲೆ ಉಗ್ರರು ಬೆಳಗಿನ ಜಾವ ಸುಮಾರು 4 ಗಂಟೆಗೆ ದಾಳಿ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.