ನವದೆಹಲಿ: ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಒಂದು ವರ್ಷವಾಗುತ್ತಿದೆ. ಇದರ ಸ್ಮರಣಾರ್ಥ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಶ್ರೀನಗರಕ್ಕೆ ತೆರಳುತ್ತಿದ್ದಾರೆ.
ಸೆ.29ಕ್ಕೆ ನಿರ್ಮಲಾ ಶ್ರೀನಗರಕ್ಕೆ ತೆರಳಲಿದ್ದು, ಸೆ.30ರಂದು ಸಿಯಾಚಿನ್ಗೆ ಭೇಟಿಕೊಡಲಿದ್ದಾರೆ. ಭೇಟಿಯ ವೇಳೆ ಅವರು ಹಿರಿಯ ಕಮಾಂಡರ್ಗಳೊಂದಿಗೆ ಮಾತುಕತೆ ನಡೆಸಲಿದ್ದು, ಭದ್ರತಾ ಪರಿಸ್ಥಿತಿಯ ವಿವರ ಪಡೆಯಲಿದ್ದಾರೆ.
ರಕ್ಷಣಾ ಸಚಿವೆಯಾದ ಬಳಿಕ ಅವರು ನಿರಂತರವಾಗಿ ಸೇನಾಪಡೆಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಸೆ.29ರಂದು ಭಾರತದ ವಿಶೇಷ ಪಡೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸರ್ಜಿಕಲ್ ದಾಳಿ ನಡೆಸಿ ಹಲವು ಭಯೋತ್ಪಾದಕರನ್ನು ಕೊಂದು ಹಾಕಿತ್ತು, ಅವರ ಶಿಬಿರಗಳನ್ನು ನಾಶ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.