ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಿನ ತಿಂಗಳು ಬರುವ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಅಯೋಧ್ಯಾದ ಸರಯು ನದಿ ತೀರದಲ್ಲಿ ಆಚರಿಸಲು ನಿರ್ಧರಿಸಿದೆ. ಈ ಸಮಾರಂಭದಲ್ಲಿ ಸಿಎಂ, ರಾಜ್ಯಪಾಲರು ಸೇರಿದಂತೆ ಇಡೀ ಸಚಿವ ಸಂಪುಟ, ಅಧಿಕಾರಿ ವರ್ಗವೇ ಅಲ್ಲಿ ಹಾಜರಿರಲಿದೆ.
ದೇಗುಲ ನಗರಿಯ ಅಯೋಧ್ಯಾದಲ್ಲೇ ದೀಪಾವಳಿ ಸಮಾರಂಭ ನಡೆಯಬೇಕೆಂದು ಯೋಗಿಯ ಇಚ್ಛೆಯಾಗಿದ್ದು, ಇದಕ್ಕಾಗಿ ಸರಯು ಘಾಟ್ ಅಲಂಕೃತಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ದೀಪಾವಳಿಯ ಮುನ್ನ ದಿನ ಅ.18ರಂದು ಸಮಾರಂಭ ಜರುಗಲಿದೆ. ದೀಪಾವಳಿ ಸಂದರ್ಭದಲ್ಲಿ ಯೋಗಿ ಗೋರಖ್ಪುರದಲ್ಲಿ ದೀಪಾವಳಿ ಪೂಜೆಯನ್ನು ನೆರವೇರಿಸಲಿದ್ದಾರೆ.
ಕಾನೂನು ಕಾರಣಗಳಿಂದಾಗಿ ರಾಮಜನ್ಮಭೂಮಿಯ ಸಮೀಪ ದೀಪಾಲಂಕಾರ ಮಾಡದಿರಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.