ನವದೆಹಲಿ: ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಹೀರಾತಿನ ಮೂಲಕ ದೇಶದ ಜನರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ನಿಮ್ಮ ಆಶೀರ್ವಾದದಿಂದ ಪ್ರಧಾನಿ ಪಟ್ಟವನ್ನು ಪಡೆದಿರುವ ನಾನು ಕೃತಜ್ಞತೆಯಿಂದ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಅಂತ್ಯೋದಯ ನಮ್ಮ ಮೂಲಮಂತ್ರ, ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಬಡವರ, ರೈತರ ಮತ್ತು ಶೋಷಿತರನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಜನಧನ್, ಜೀವನ್ ಜ್ಯೋತಿ ಭಿಮಾ ಯೋಜನ, ಸುರಕ್ಷಾ ಯೋಜನ, ಅಟಲ್ ಪಿಂಚಣಿ ಯೋಜನೆಗಳು ಇದಕ್ಕೆ ನಿದರ್ಶನ.
ಸಂಪನ್ಮೂಲಗಳ ಹಂಚಿಕೆಯನ್ನು ಬಿಡ್ಡಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲು ತೀರ್ಮಾನಿಸಿದ್ದೇವೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಿಂದ 3 ಲಕ್ಷ ಕೊಟಿ, ತರಂಗಂತರ ಹರಾಜಿನಿಂದ 1 ಲಕ್ಷ ಕೋಟಿ ರೂಪಾಯಿ ಲಾಭವಾಗಲಿದೆ.
ದೇಶದ ಆರ್ಥಿಕತೆ ಶರವೇಗದಿಂದ ವೃದ್ಧಿಯಾಗುತ್ತಿದೆ, ಬೆಲೆ ಏರಿಕೆ ನಿಯಂತ್ರಣದಲ್ಲಿದೆ, ಎಲ್ಲಾ ವಲಯದಲ್ಲಿ ಉತ್ಸಾಹ ಮೂಡಿರುವುದು ತೃಪ್ತಿ ತಂದಿದೆ, ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸುತ್ತಿದೆ. ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ. ಕಪ್ಪುಹಣ ವಾಪಾಸ್ಸಾತಿಗೆ ಬದ್ಧರಾಗಿರುವ ನಾವು ವಿಶೇಷ ತನಿಖಾ ದಳವನ್ನು ಸ್ಥಾಪಿಸಿದ್ದೇವೆ.
ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ, ನಮಾಮಿ ಗಂಗೆ ಯೋಜನೆ ಮುಂತಾದ ಯೋಜನೆಗಲನ್ನು ಜಾರಿಗೆ ತಂದಿದ್ದೇವೆ. ಇದರಿಂದ ಜನರ ಜೀವನ ಮಟ್ಟ ಸುಧಾರಿಸುವ ಭರವಸೆ ಇದೆ.
ಎಲ್ಲರನ್ನು ಒಗ್ಗೂಡಿಸುವ ಆಶಯದೊಂದಿಗೆ ಡಿಜಿಟಲ್ ಇಂಡಿಯಾ ಕನೆಕ್ಟಿವಿಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ಮೊದಲ ವರ್ಷದ ಯಶಸ್ಸಿನ ಯಾತ್ರೆಯಿಂದ ದೇಶ ಕಳೆದುಕೊಂಡಿದ್ದ ವಿಶ್ವಾಸವನ್ನು ಮರಳಿ ಪಡೆದಿದೆ ಎಂದು ಅವರು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.