ಕೋಲ್ಕತ್ತಾ: ಕೋಲ್ಕತ್ತಾದ ಶಿಬಪುರದಲ್ಲಿನ ಇಂಡಿಯನ್ ಬೊಟಾಣಿಕ್ ಗಾರ್ಡನ್ನಲ್ಲಿನ ಆಲದ ಮರ 255 ವರ್ಷ ಹಳೆಯದು. ಆದರೆ ಇಂದಿಗೂ ತನ್ನ ಬೆಳವಣಿಗೆಯನ್ನು ನಿಲ್ಲಿಸದ ಅದು 5 ಎಕರೆ ವ್ಯಾಪ್ತಿಯಲ್ಲಿ ಹರಡಿ ಬೃಹದಾಕಾರವಾಗಿದೆ.
1985ರಲ್ಲಿ ಈ ಮರದ ಸುತ್ತ ಬೇಲಿ ಹಾಕುವಾಗ ಇದರ ಹರಡುವಿಕೆ 3 ಎಕರೆ ಪ್ರದೇಶದಲ್ಲಿತ್ತು. 32 ವರ್ಷಗಳ ತರುವಾಯ ಇಂದು ಅದರ ವಿಸ್ತೀರ್ಣ 5 ಎಕರೆ. ಹೀಗಾಗೀ ಕೋಲ್ಕತ್ತಾ ನಗರದ ಈ ಹಿರಿಯ ವಯಸ್ಕನಿಗೆ ಇದೀಗ ಹೊಸ ಬೇಲಿಯನ್ನು ಹಾಕಲಾಗಿದೆ.
ಈ ಆಲದ ಮರವನ್ನು ನೋಡಿಕೊಳ್ಳುತ್ತಿರುವ ಬೊಟಾನಿಕಲ್ ಗಾರ್ಡನ್, ಇದಕ್ಕೆ ‘ದಿ ವಾಕಿಂಗ್ ಟ್ರೀ’ ಎಂದು ಹೆರಿಟ್ಟಿದೆ. 1925ರಲ್ಲೇ ಈ ಮರದ ಮುಖ್ಯ ಕಾಂಡ ಸೋಂಕಿನಿಂದ ಮೃತಪಟ್ಟಿದೆ. ಆದರೂ ಇಂದಿಗೂ ಈ ಮರ ತನ್ನ 4 ಸಾವಿರ ಉಪ ಗಿಡಗಳ ಕಾಂಡಗಳಿಂದ ಜೀವಿಸುತ್ತಿರುವುದು ವಿಶೇಷ.
ಅತೀದೊಡ್ಡ ಮೇಲಾವರಣ ಮತ್ತು ವಿಶಾಲತೆಯನ್ನು ಹೊಂದಿರುವ ಮರ ಇದೆಂದು ಗಿನ್ನಿಸ್ ದಾಖಲೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.