ರಾಂಚಿ: ಮನೆಯಲ್ಲಿ ಟಾಯ್ಲೆಟ್ ಇದ್ದರೂ ಬಯಲಿನಲ್ಲಿ ಶೌಚಗೊಳಿಸುವ ಪುರುಷರ ವಿರುದ್ಧ ಜಾರ್ಖಾಂಡ್ನ ರಾಂಚಿ ಮಹಾನಗರ ಪಾಲಿಕೆ ಸಮರ ಸಾರಿದೆ. ವಿನೂತನ ಅಭಿಯಾನದ ಮೂಲಕ ಅವರಿಗೆ ಬಯಲಿನಲ್ಲಿ ಶೌಚ ಮಾಡುವುದು ಎಷ್ಟು ಮುಜುಗರದ ವಿಷಯ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದೆ.
ಬಯಲಿನಲ್ಲಿ ಶೌಚ ಮಾಡುತ್ತಿದ್ದ ಪುರುಷರ ಲುಂಗಿಗಳನ್ನು ಪಾಲಿಕೆಯ ಸಿಬ್ಬಂದಿಗಳು ಎಳೆದು ತೆಗೆದಿದ್ದಾರೆ. ಇನ್ನು ಮುಂದೆ ಬಯಲಿನಲ್ಲಿ ಶೌಚ ಮಾಡುವುದಿಲ್ಲ ಎಂದು ಅವರಿಂದ ಪ್ರತಿಜ್ಞೆ ಮಾಡಿಸಿ ಬಳಿಕ ಲುಂಗಿ ವಾಪಾಸ್ ಮಾಡಿದ್ದಾರೆ.
ಇದುವರೆಗೆ 20 ಮಂದಿಯ ಲುಂಗಿ ಎಳೆಯುವ ಕಾರ್ಯ ಮಾಡಲಾಗಿದ್ದು, ಇವರೆಲ್ಲ ಮನೆಯಲ್ಲಿ ಟಾಯ್ಲೆಟ್ ಇದ್ದೂ ಅದನ್ನು ಬಳಸದವರಾಗಿದ್ದಾರೆ. ಇವರಿಗೆ 100.ರೂ ದಂಡವನ್ನೂ ವಿಧಿಸಲಾಗಿದೆ.
‘ಹಲ್ಲಾ ಬೋಲ್ ಲುಂಗಿ ಖೋಲ್ ಅಭಿಯಾನ್’ ಇದಾಗಿದ್ದು, ಡೆಡ್ಲೈನ್ ಸೆ.30ರೊಳಗೆ ನಗರವನ್ನು ಬಯಲು ಶೌಚಮುಕ್ತಗೊಳಿಸುವ ಗುರಿಯೊಂದಿಗೆ ಇದನ್ನು ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.