ನವದೆಹಲಿ: ರೋಹಿಂಗ್ಯಾ ಮುಸ್ಲಿಮರನ್ನು ಮರಳಿ ಮಯನ್ಮಾರ್ಗೆ ಕಳುಹಿಸುವ ಸರ್ಕಾರದ ದೃಢ ನಿಲುವನ್ನು ಗೃಹಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ರೋಹಿಂಗ್ಯಾಗಳು ನಿರಾಶ್ರಿತರಲ್ಲ, ಅವರು ಅಕ್ರಮ ವಲಸಿಗರು ಎಂದಿರುವ ರಾಜನಾಥ್, ರೋಹಿಂಗ್ಯಾಗಳ ವಿಷಯದಲ್ಲಿ ಭಾರತ ಯಾವುದೇ ಕಾನೂನಿನ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ನಿಲುವು ಭಾರತಕ್ಕೆ ಬಂದಿರುವ ಎಲ್ಲಾ ರೋಹಿಂಗ್ಯಾಗಳಿಗೂ ಅನ್ವಯವಾಗುತ್ತದೆ. ಇದುವರೆಗೆ ಭಾರತದಲ್ಲಿ ಆಶ್ರಮ ಕೇಳಿ ಯಾವೊಬ್ಬ ರೋಹಿಂಗ್ಯನೂ ಅರ್ಜಿ ಹಾಕಿಲ್ಲ ಎಂದಿದ್ದಾರೆ.
ರೋಹಿಂಗ್ಯಾಗಳ ಅಕ್ರಮ ವಲಸೆ ಆಂತರಿಕ ಭದ್ರತೆಗೆ ಸಂಬಂಧಿಸಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.