ನವದೆಹಲಿ: ಚೀನಾವನ್ನು ಹಿಂದಿಕ್ಕಿರುವ ಭಾರತ 2017ರ ಟಾಪ್ ಚಿಲ್ಲರೆ ಮಾರಾಟ ತಾಣವಾಗಿ ಹೊರಹೊಮ್ಮಿದೆ. ಗ್ಲೋಬಲ್ ರಿಟೇಲ್ ಡೆವಲಪ್ಮೆಂಟ್ ಇಂಡೆಕ್ಸ್ನ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದೆ.
ಇಂಡಿಯಾ ರಿಟೇಲ್ ಫೋರಂ 2017ನ ಎರಡನೇ ದಿನ ಮಾತನಾಡಿದ ಎಟಿ ಕೆಯರ್ನೆ ಪಾಲುದಾರ ಸುಭೆಂದು ರಾಯ್ ಈ ಬಗ್ಗೆ ತಿಳಿಸಿದ್ದಾರೆ.
ಹೆಚ್ಚಾದ ಗ್ರಾಹಕ ಖರ್ಚು, ಹೆಚ್ಚಾದ ಮೊಬೈಲ್ ಮತ್ತು ಅಂತರ್ಜಾಲ ಬಳಕೆ, ವಿದೇಶಿ ಬಂಡವಾಳ ಸ್ನೇಹಿ ವಾತಾವರಣ, ನಗದು ವ್ಯವಹಾರದ ವಿರುದ್ಧ ಕಠಿಣ ಕ್ರಮ, ಜಿಎಸ್ಟಿ ಮುಂತಾದುವುಗಳಿಂದ ಗ್ಲೋಬಲ್ ರಿಟೇಲ್ ಡೆವಲಪ್ಮೆಂಟ್ ಇಂಡೆಕ್ಸ್ನಲ್ಲಿ ಈ ವರ್ಷ ಭಾರತ ಟಾಪ್ ಸ್ಥಾನ ಪಡೆದುಕೊಂಡಿದೆ ಎಂದು ರಾಯ್ ವಿಶ್ಲೇಷಿಸಿದ್ದಾರೆ.
ಇವುಗಳ ಮುಖೇನ ಜಾಗತಿಕ ಬ್ರ್ಯಾಂಡ್ಗಳು ಭಾರತದೊಳಗೆ ಸುಲಭವಾಗಿ, ಪಾರದರ್ಶಕವಾಗಿ ಒಳ ಬಂದಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.