ಗುವಾಹಟಿ: ಗುವಾಹಟಿಯ ಬಿಶ್ನುಪುರದ ನಿವಾಸಿಗಳು ಬಿದಿರನ್ನು ಬಳಸಿ 70 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ಎತ್ತರವನ್ನು 100 ಅಡಿಗಳಿಗೆ ಎರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದೀಗ ಈ ಪ್ರತಿಮೆ ಇದೀಗ ವಿಶ್ವ ದಾಖಲೆಯ ರೇಸ್ನಲ್ಲಿದೆ.
ಸುಮಾರು 70 ಕಾರ್ಮಿಕರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 6 ಸಾವಿರ ದೇಶೀಯ ಬಿದಿರಿನ ತುಂಡುಗಳನ್ನು ಬಳಕೆ ಮಾಡಲಾಗಿದೆ. ಪ್ರಯತ್ನದ ಫಲವಾಗಿ ಒಟ್ಟು 72 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವಲ್ಲಿ ಇವರು ಸಫಲರಾದರು. ಆದರೆ ಅದು ಪ್ರತಿಷ್ಠಾಪನೆಗೊಂಡ 72 ಗಂಟೆಗಳ ತರುವಾರ ಸಿಡಿಲು ಮಳೆಗೆ ಪ್ರತಿಮೆ ಕೆಳಕ್ಕೆ ಬಿತ್ತು. ಮತ್ತೆ ಅದನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಎತ್ತರ 70 ಅಡಿಗಳಿಗೆ ಇಳಿಕೆಯಾಯಿತು.
ಆದರೂ ನವರಾತ್ರಿ ಮುಗಿಯುವುದರೊಳಗೆ ದುರ್ಗೆಯನ್ನು 100 ಅಡಿಗಳಿಗೆ ಏರಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ವಿಶ್ವ ದಾಖಲೆ ಬರೆಯುವ ಗುರಿ ಇವರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.