ನವದೆಹಲಿ: ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಸಂಪರ್ಕ ಶುಲ್ಕವನ್ನು ಪ್ರತಿ ನಿಮಿಷಕ್ಕೆ 6 ಪೈಸೆಗೆ ಇಳಿಕೆ ಮಾಡಿದೆ. ಪ್ರಸ್ತುತ ಶುಲ್ಕ 14 ಪೈಸೆ ಇದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬರಲಿದೆ.
2020ರ ಜನವರಿ 1ರ ವೇಳೆಗೆ ಈ ಶುಲ್ಕ ಸಂಪೂರ್ಣವಾಗಿ ರದ್ದಾಗಲಿದೆ.
ಬೇರೆ ಬೇರೆ ಕಂಪನಿಗೆ ಸೇರಿದ ಮೊಬೈಲ್ ಗ್ರಾಹಕರ ಕರೆಯನ್ನು ಒಂದಕ್ಕೊಂದು ಲಿಂಕ್ ಮಾಡಲು ಮೊಬೈಲ್ ಸರ್ವಿಸ್ ಪೂರೈಕೆದಾರ ಪಾವತಿಸುವ ಹಣವೇ ಕರೆ ಸಂಪರ್ಕ ಶುಲ್ಕ (ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್). ಅಂದರೆ ಏರ್ಟೆಲ್ ಗ್ರಾಹಕ ರಿಲಾಯನ್ಸ್ನವನಿಗೆ ಕರೆ ಮಾಡಿದರೆ ಈ ಕರೆ ಕನೆಕ್ಟ್ ಆಗಲು ಏರ್ಟೆಲ್ ಕಂಪನಿ ರಿಲಾಯನ್ಸ್ಗೆ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ.
ಇದೀಗ ಕರೆ ಸಂಪರ್ಕ ಶುಲ್ಕವನ್ನು ಕಡಿತ ಮಾಡಿರುವುದರಿಂದ ಗ್ರಾಹಕರ ಕರೆಯ ಶುಲ್ಕದಲ್ಲೂ ತುಸು ಕಡಿಮೆಯಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.