ಕೋಲ್ಕತ್ತಾ: ಶಿಷ್ಟ ರಕ್ಷಕಿ ದುಷ್ಟ ಸಂಹಾರಿ ದುರ್ಗಾ ಮಾತೆಯ ಆರಾಧನೆಗೆ ಇಡೀ ದೇಶ ಸಜ್ಜಾಗಿದೆ. ದುರ್ಗಾ ಪೂಜೆಗೆ ಹೆಸರುವಾಸಿಯಾಗಿರುವ ಕೋಲ್ಕತ್ತಾದಲ್ಲಿ ದುರ್ಗಾ ಮಾತೆಯನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ಮನಮೋಹಕ ಚಿತ್ತಾರ ಹಾಕಲಾಗಿದೆ.
ಡಾನ್ ಆಫ್ ಮಹಾಲಯ, ಸಿಟಿ ಆಫ್ ಜಾಯ್ ಎಂದು ಕರತೆಯಲ್ಪಡುವ ಕೋಲ್ಕತ್ತಾದಲ್ಲಿ ಮಂಗಳವಾರ ದುರ್ಗಾ ಮಾತೆಯನ್ನು ಸ್ವಾಗತಿಸುವುದಕ್ಕಾಗಿ ರಸ್ತೆಯುದ್ದಕ್ಕೂ ಬೆಂಗಾಳಿ ಫ್ಲೋರ್ ಆರ್ಟ್ ಅಲ್ಪನವನ್ನು ಬಿಡಿಸಲಾಗಿತ್ತು. ಇದು ದೇಶದ ಅತೀ ಉದ್ದದ ಪೇಟಿಂಗ್ ಎಂಬ ಖ್ಯಾತಿ ಪಾತ್ರವಾಗಿದೆ.
ಸುಮಾರು 400 ಕಲಾವಿದರು ಒಟ್ಟು ಸೇರಿ ಲೇಕ್ ರೋಡ್ನಲ್ಲಿ 1 ಕಿಮೀ ಉದ್ದದವರೆಗೆ ಅಲ್ಪನವನ್ನು ಬಿಡಿಸಿದ್ದಾರೆ. ಹಲವಾರು ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಈ ಕಾಯಕದಲ್ಲಿ ಕೈಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ಭಾರೀ ಸುದ್ದಿ ಮಾಡುತ್ತಿವೆ.
ದಸರಾದ ಮೊದಲ ದಿನ ಮಹಾಲಯವಾಗಿದ್ದು, ಬೆಂಗಾಳಿಗಳು ಸೇರಿದಂತೆ ದೇಶದ ವಿವಿಧ ಮೂಲೆಯ ಜನ ದುರ್ಗೆಗೆ ಸ್ವಾಗತ ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.