ನವದೆಹಲಿ: ಚೀನಾ ಮತ್ತು ಏಷ್ಯಾಗೆ ವಯಸ್ಸಾಗುತ್ತಿರುವ ಈ ಸಂದರ್ಭದಲ್ಲಿ ಅಧಿಕ ಪ್ರಮಾಣದ ಯುವ ಸಮುದಾಯವನ್ನು ಹೊಂದಿರುವ ಭಾರತ ಎಕನಾಮಿಕ್ ಸೂಪರ್ ಪವರ್ ಆಗುವತ್ತ ಮುನ್ನುಗ್ಗುತ್ತಿದೆ ಎಂದು ಡೆಲೊಯಿಟ್ಟೆ ಎಲ್ಎಲ್ಪಿ ಹೇಳಿದೆ.
ಭಾರತದ ಯುವ ಸಮುದಾಯ ಮುಂಬರುವ ದಶಕಗಳಲ್ಲಿ ಪ್ರಗತಿ ಪಥದಲ್ಲಿ ಚೀನಾ ಮತ್ತು ಜಪಾನ್ನ್ನು ಹಿಂದಿಕ್ಕಲಿದೆ ಎಂದಿದೆ.
2027ರ ವೇಳೆಗೆ 65 ವರ್ಷ ದಾಟಿದ ಜನಸಂಖ್ಯೆ ಏಷ್ಯಾದಲ್ಲಿ ಈಗಿರುವ 364 ಮಿಲಿಯನ್ನಿಂದ ಅರ್ಧ ಬಿಲಿಯನ್ಗೆ ಏರಲಿದೆ. ಇದೇ ಸಂದರ್ಭದಲ್ಲಿ ಭಾರತ ಕಾರ್ಯಪಡೆ 885 ಮಿಲಿಯನ್ನಿಂದ 1.08 ಬಿಲಿಯನ್ಗೆ ಏರಿಕೆಯಾಗಲಿದೆ.
ಮುಂಬರುವ ದಶಕಗಳಲ್ಲಿ ಭಾರತ ಏಷ್ಯಾದ ಅರ್ಧದಷ್ಟು ಕಾರ್ಯಪಡೆಯನ್ನು ಹೊಂದಲಿದೆ. ಕೇವಲ ಕೆಲಸ ಮಾಡುವ ಯುವಕರ ಸಂಖ್ಯೆಯಲ್ಲಿ ಏರಿಕೆ ಮಾತ್ರವಲ್ಲ, ಪ್ರಸ್ತುತ ಇರುವುದಕ್ಕಿಂತ ಉತ್ತಮವಾಗಿ ತರಬೇತಿ ಹೊಂದಿದ, ಶಿಕ್ಷಣ ಪಡೆದ ಯುವ ಪಡೆಯನ್ನು ಭಾರತ ಹೊಂದಲಿದೆ.
ಮಹಿಳಾ ಕಾರ್ಯಪಡೆಯ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುವುದರಿಂದ ಆರ್ಥಿಕ ಸಂಭಾವ್ಯತೆಯೂ ಏರಿಕೆಯಾಗಲಿದೆ. ಪ್ರತಿಯ ಪಥದಲ್ಲಿ ಚೀನಾ, ಜಪಾನ್ನನ್ನು ಭಾರತ ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.